ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ಕುಸಿತ - ಕೆಲವೆಡೆ - 2ರಷ್ಟುತಾಪ ದಾಖಲು : ಜಲ​ಮೂ​ಲ​ಗ​ಳು ಹೆಪ್ಪು

| Published : Jan 08 2025, 07:52 AM IST

Ooty IRCTC Tour Package

ಸಾರಾಂಶ

ಜನಪ್ರಿಯ ಪ್ರವಾಸಿ ತಾಣವಾಗಿರುವ ಉದಕಮಂಡಲದಲ್ಲಿ (ಊಟಿ) ತಾಪಮಾನ ಶೂನ್ಯಕ್ಕೆ ತಲುಪಿದೆ.

ಉದಕಮಂಡಲ: ಜನಪ್ರಿಯ ಪ್ರವಾಸಿ ತಾಣವಾಗಿರುವ ಉದಕಮಂಡಲದಲ್ಲಿ (ಊಟಿ) ತಾಪಮಾನ ಶೂನ್ಯಕ್ಕೆ ತಲುಪಿದೆ.

ಇದೇ ವೇಳೆ ಊಟಿ ಸನಿ​ಹದ ಎವ​ಲಾಂಚ್‌ ಎಂಬ​ಲ್ಲಿ ತಾಪಮಾನ -2 ಡಿಗ್ರಿಗೆ ಕುಸಿ​ದಿ​ದೆ. ಊಟಿ, ಕಂಥಲ್‌, ಥಲೈಕುಂಥ ಪ್ರದೇಶಗಳಲ್ಲಿನ ಜಲ​ಮೂ​ಲ​ಗ​ಳು ಹೆಪ್ಪುಗ​ಟ್ಟಿ​ವೆ. ಇದರಿಂದ ಜನರು ಪರದಾಡುವಂತಾಗಿದೆ.

ಅತ್ತ ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ. ಈ ಚಳಿಯು ಇನ್ನೂ ಕೆಲ ದಿನಗಳ ಕಾಲ ಹೀಗೆಯೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರದಲ್ಲೂ:

ಈ ನಡುವೆ, ಉತ್ತರ ಭಾರತವೂ ಚಳಿಯಿಂದ ನಡುಗುತ್ತಿದೆ ಕಾಶ್ಮೀರದಲ್ಲಿ ಮೈನಸ್‌ 7.8, ರಾಜಸ್ಥಾನದಲ್ಲಿ 2.5, ಹರ್ಯಾಣದಲ್ಲಿ 5 ಡಿಗ್ರಿ, ದಿಲ್ಲಿಯಲ್ಲಿ 10.5 ಡಿಗ್ರ ಉಷ್ಣಾಂಶ ದಾಖಲಾಗಿದೆ.