ಸಾರಾಂಶ
ಅಮೆರಿಕದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕಾ ಕಂಪನಿಯಾದ ಎಲಾನ್ ಮಸ್ಕ್ ಅವರ ಟೆಸ್ಲಾ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ)ನಲ್ಲಿ ತನ್ನ ಮೊದಲ ಶೋರೂಂ ಆರಂಭಿಸಲಿದ್ದು, ಈ ಕುರಿತು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ಹೇಳಿವೆ.
ಮುಂಬೈ: ಅಮೆರಿಕದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕಾ ಕಂಪನಿಯಾದ ಎಲಾನ್ ಮಸ್ಕ್ ಅವರ ಟೆಸ್ಲಾ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ)ನಲ್ಲಿ ತನ್ನ ಮೊದಲ ಶೋರೂಂ ಆರಂಭಿಸಲಿದ್ದು, ಈ ಕುರಿತು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ಹೇಳಿವೆ. ಇದು ಭಾರತದಲ್ಲಿನ ಟೆಸ್ಲಾದ ಮೊದಲ ಶೋರೂಂ ಆಗಲಿದೆ.
ಬಿಕೆಸಿಯಲ್ಲಿರುವ ವಾಣಿಜ್ಯ ಗೋಪುರದ ನೆಲಮಹಡಿಯಲ್ಲಿ 4,000 ಚದರ ಅಡಿ ಜಾಗವನ್ನು 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲಿದೆ. ಇದರ ಮಾಸಿಕ ಬಾಡಿಗೆ ತಿಂಗಳಿಗೆ ಸುಮಾರು 35 ಲಕ್ಷ ರು. ಇರಲಿದೆ.ದೆಹಲಿಯಲ್ಲಿ ಟೆಸ್ಲಾ 2ನೇ ಶೋರೂಂ ತೆರೆಯುವ ನಿರೀಕ್ಷೆಯಿದೆ. ಇತ್ತೀಚೆಗೆ ಅಮೆರಿಕದಲ್ಲಿ ಪ್ರಧಾನಿ ಮೋದಿ ಮತ್ತು ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಭೇಟಿ ಬಳಿಕ ಭಾರತದಲ್ಲಿ 13 ಹುದ್ದೆಗಳಿಗೆ ಟೆಸ್ಲಾ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರ ಬೆನ್ನಲ್ಲೆ ಮೊದಲ ಶೋರೂಂ ಆರಂಭಿಸುವುದಾಗಿ ಮೂಲಗಳು ಹೇಳಿವೆ.