ಸಾರಾಂಶ
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ಲೋಕಸಭೆಯಲ್ಲಿ ಅವರ ಪ್ರತಿಯೊಂದು ವಿಷಯದ ಪ್ರಶ್ನೆಗೂ ಆ ಕ್ಷಣದಲ್ಲೇ ಸಚಿವರು ಉತ್ತರ ನೀಡಿದ ಅಪರೂಪದ ಪ್ರಸಂಗಗಳು ನಡೆದವು.
ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ಲೋಕಸಭೆಯಲ್ಲಿ ಅವರ ಪ್ರತಿಯೊಂದು ವಿಷಯದ ಪ್ರಶ್ನೆಗೂ ಆ ಕ್ಷಣದಲ್ಲೇ ಸಚಿವರು ಉತ್ತರ ನೀಡಿದ ಅಪರೂಪದ ಪ್ರಸಂಗಗಳು ನಡೆದವು.
ಹಿಂದೂಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ರಾಹುಲ್ ಟೀಕಸಿದಾಗ 2 ಸಲ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಿದರು. ಇನ್ನು ರಾಹುಲ್‌ರ ಅನೇಕ ಟೀಕೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಲವು ಬಾರಿ ಎದ್ದು ನಿಂತು ಎದರೇಟು ನೀಡುವ ಯತ್ನ ಮಾಡಿದರು.
ಇನ್ನು ರಾಹುಲ್ ಅಗ್ನಿವೀರ ಯೋಜನೆ ಟೀಕಿಸಿದಾಗ ರಕ್ಷಣಾ ಸಚಿವ ರಾಜನಾಥ ಸಿಂಗ್, ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದಾಗ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಯಾ ಕ್ಷಣದಲ್ಲೇ ಉತ್ತರಿಸಿ ತಿರುಗೇಟು ನೀಡಿದರು.