ಸಾರಾಂಶ
ದೆಹಲಿಯಲ್ಲಿ ತಾಪಮಾನ 52 ಡಿಗ್ರಿ ದಾಖಲಾದ ಬೆನ್ನಲ್ಲೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ 56 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ)ದ ಸ್ವಯಂಚಾಲಿತ ಹವಾಮಾನ ಕೇಂದ್ರದ ಸಂವೇದಕ (ಎಡಬ್ಲುಎಸ್) ತೋರಿಸಿದೆ.
ನಾಗ್ಪುರ: ದೆಹಲಿಯಲ್ಲಿ ತಾಪಮಾನ 52 ಡಿಗ್ರಿ ದಾಖಲಾದ ಬೆನ್ನಲ್ಲೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ 56 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ)ದ ಸ್ವಯಂಚಾಲಿತ ಹವಾಮಾನ ಕೇಂದ್ರದ ಸಂವೇದಕ (ಎಡಬ್ಲುಎಸ್) ತೋರಿಸಿದೆ. ಇದು ಆತಂಕ ಉಂಟು ಮಾಡಿದೆ. ಆದರೆ ಐಎಂಡಿ ತಾಪಮಾನದ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲ.
ಆದರೆ, ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿಗಳು ಎಡಬ್ಲುಎಸ್ ನೀಡುವ ತಾಪಮಾನ ನಿಖರತೆಯನ್ನು ತಳ್ಳಿಹಾಕಿದ್ದಾರೆ ಹಾಗೂ ಇದೊಂದು ದೋಷಪೂರಿತ ವರದಿಯೆಂದು ತಿಳಿಸಿದ್ದಾರೆ. ‘ಎಡಬ್ಲುಎಸ್ ಸೆನ್ಸರ್‌ಗಳು 38-40 ಡಿಗ್ರಿ ಕಡಿಮೆ ತಾಪಮಾನವಿದ್ದಾಗ ಅವು ಉತ್ತಮವಾಗಿ ಕೆಲಸ ನಿರ್ವಹಿಸುತ್ತವೆ. ಗರಿಷ್ಠ 38 ಅಥವಾ 40 ಡಿಗ್ರಿ ತಾಪಮಾನವನ್ನು ತಲುಪಿದ ಬಳಿಕ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಇವು ವಿಶ್ವಾಸಾರ್ಹವಲ್ಲ’ ಎಂದಿದ್ದಾರೆ.
ಎಡಬ್ಲುಎಸ್ ಸಂವೇದಕ ಸಂವೇದಕಗಳನ್ನು ಯುರೋಪಿಯನ್ ದೇಶದಿಂದ ಅಮದು ಮಾಡಿಕೊಳ್ಳಲಾಗಿದೆ.