ರಾಮಮಂದಿರದ ಮೇಲೆ ಹಾರಿಸಲಾಗಿರುವ ಧ್ವಜಕ್ಕೆ ರಾಮಾಯಣ, ಮಹಾಭಾರತದ ಕಾಲದ ಇತಿಹಾಸವಿರುವ ಬಗ್ಗೆ ಇತಿಹಾಸತಜ್ಞ ಲಲಿತ್‌ ಮಿಶ್ರಾ ಬೆಳಕು ಚೆಲ್ಲಿದ್ದಾರೆ. ಮೇವಾರದ ಚಿತ್ರಕಲಾ ರಾಮಾಯಣದಲ್ಲಿ ಕೋವಿದಾರ ವೃಕ್ಷದ ಚಿತ್ರ ಕಂಡುಬಂತು. ನಂತರ ವಾಲ್ಮೀಕಿ ರಾಮಾಯಣವನ್ನು ಹುಡುಕಾಡಿದಾಗ ಅಲ್ಲಿಯೂ ಇದರ ಉಲ್ಲೇಖವಿರುವುದು ತಿಳಿಯಿತು. ರಾಮಾಯಣ ಕಾಲದಲ್ಲಿ ಚಾಲ್ತಿಯಲ್ಲಿದ್ದ ಧ್ವಜ ಮಹಾಭಾರತ ಯುದ್ಧದ ನಂತರ ಜನಮಾನಸದಿಂದ ಮರೆಯಾಯಿತು ಎಂದು ತಿಳಿಸಿದ್ದಾರೆ.

-ಇತಿಹಾಸತಜ್ಞ ಲಲಿತ್‌ ಮಿಶ್ರಾ ಮಾಹಿತಿ

ಅಯೋಧ್ಯೆ: ರಾಮಮಂದಿರದ ಮೇಲೆ ಹಾರಿಸಲಾಗಿರುವ ಧ್ವಜಕ್ಕೆ ರಾಮಾಯಣ, ಮಹಾಭಾರತದ ಕಾಲದ ಇತಿಹಾಸವಿರುವ ಬಗ್ಗೆ ಇತಿಹಾಸತಜ್ಞ ಲಲಿತ್‌ ಮಿಶ್ರಾ ಬೆಳಕು ಚೆಲ್ಲಿದ್ದಾರೆ. ಮೇವಾರದ ಚಿತ್ರಕಲಾ ರಾಮಾಯಣದಲ್ಲಿ ಕೋವಿದಾರ ವೃಕ್ಷದ ಚಿತ್ರ ಕಂಡುಬಂತು. ನಂತರ ವಾಲ್ಮೀಕಿ ರಾಮಾಯಣವನ್ನು ಹುಡುಕಾಡಿದಾಗ ಅಲ್ಲಿಯೂ ಇದರ ಉಲ್ಲೇಖವಿರುವುದು ತಿಳಿಯಿತು. ರಾಮಾಯಣ ಕಾಲದಲ್ಲಿ ಚಾಲ್ತಿಯಲ್ಲಿದ್ದ ಧ್ವಜ ಮಹಾಭಾರತ ಯುದ್ಧದ ನಂತರ ಜನಮಾನಸದಿಂದ ಮರೆಯಾಯಿತು ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಋಷಿ ಕಶ್ಯಪರು ಮಂದಾರ ಮತ್ತು ಪಾರಿಜಾತ ಗಿಡಗಳ ಕಸಿ ಮಾಡಿ ಕೋವಿದಾರ ವೃಕ್ಷವನ್ನು ಅಭಿವೃದ್ಧಿಪಡಿಸಿದರು. ಕಾಳಿದಾಸ ಕಾವ್ಯದಲ್ಲಿಯೂ ಇದರ ವರ್ಣನೆಯಿದೆ. ಸೂರ್ಯ ಮತ್ತು ಕೋವಿದಾರ ವೃಕ್ಷದ ಚಿತ್ರವುಳ್ಳ ಧ್ವಜವನ್ನು ಅಯೋಧ್ಯೆಯಲ್ಲಿ ಬಳಸಲಾಗುತ್ತಿತ್ತು. ಮಹಾಭಾರತ ಯುದ್ಧ ನಡೆಯುವಾಗ ಅಯೋಧ್ಯೆಯ ದೊರೆ ಬೃಹದ್ಬಲ ಭಾಗವಹಿಸಿದ್ದ. ಯುದ್ಧದಲ್ಲಿ ಆತ ಮರಣಿಸಿದ ಬಳಿಕ ಅಯೋಧ್ಯೆ ನಶಿಸಿತು, ಧ್ವಜದ ಕಲ್ಪನೆಯೂ ಕಣ್ಮರೆಯಾಯಿತು. ಈಗ ಮತ್ತೆ ಅದು ಮುನ್ನೆಲೆಗೆ ಬಂದಿರುವುದು ಸಂತೋಷ ತಂದಿದೆ’ ಎಂದರು.