ಭಾರತೀಯ ಪತ್ರಿಕಾ ಸಂಘದ ನಿಯೋಗ ಬುಧವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿಯಾಗಿದ್ದು, ದಿನಪತ್ರಿಕೆಗಳಿಗೆ ಸಂಬಂಧಿಸಿದ ಕೆಲ ಪ್ರಸ್ತಾವನೆಗಳನ್ನು ಅವರ ಮುಂದಿಟ್ಟಿದೆ.

ನವದೆಹಲಿ: ಭಾರತೀಯ ಪತ್ರಿಕಾ ಸಂಘದ ನಿಯೋಗ ಬುಧವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿಯಾಗಿದ್ದು, ದಿನಪತ್ರಿಕೆಗಳಿಗೆ ಸಂಬಂಧಿಸಿದ ಕೆಲ ಪ್ರಸ್ತಾವನೆಗಳನ್ನು ಅವರ ಮುಂದಿಟ್ಟಿದೆ.

9ನೇ ದರ ರಚನೆ ಸಮಿತಿಯ ಶಿಫಾರಸು, ಪತ್ರಿಕೆಗಳ ಮೇಲಿನ ಶೇ.5 ಕಸ್ಟಮ್ ಸುಂಕ ಹಿಂಪಡೆಯುವಿಕೆ, ಡಿಜಿಟಲ್ ಸುದ್ದಿ ಚಂದಾದಾರಿಕೆಯ ಮೇಲಿನ ಜಿಎಸ್‌ಟಿ ತೆರವು, ಸಿಬಿಸಿಗೆ ಇಂಗ್ಲಿಷ್ ಪತ್ರಿಕೆ ಸೇರ್ಪಡೆಯಲ್ಲಿ ತಾರತಮ್ಯ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಭಾಷೆಗಳಿಗೆ ಭಾರತೀಯ ಪತ್ರಿಕೆಗಳ ಭಾಷಾಂತರ, ಇ-ಪತ್ರಿಕೆಗಳಿಗೆ ಪ್ರತ್ಯೇಕ ದರ ನಿಗದಿ, ಲೆಕ್ಕ ಪರಿಶೋಧನಾ ವರದಿ ಸಲ್ಲಿಕೆ ಅವಧಿ ವಿಸ್ತರಣೆ, ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದ ಸಿಬಿಸಿ ಬಜೆಟ್‌ ಪರಿಷ್ಕರಣೆ, ಸಿಬಿಸಿಯ ಬಾಕಿಗಳ ಕುರಿತು ಚರ್ಚೆ ನಡೆಸಲಾಯಿತು.

ಸಂಘದ ಅಧ್ಯಕ್ಷ ರಾಕೇಶ್‌ ಶರ್ಮಾ ನೇತೃತ್ವದ ನಿಯೋಗದ ಮನವಿಗೆ ಸ್ಪಂದಿಸಿರುವ ಸಚಿವ ವೈಷ್ಣವ್‌, ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಯದರ್ಶಿ ಮೇರಿ ಪೌಲ್‌ ತಿಳಿಸಿದ್ದಾರೆ.