ಚುನಾವಣೆಗೆ ಸ್ಪರ್ಧೆ ಇಲ್ಲ: ಸಚಿವ ಜ। ವಿ.ಕೆ. ಸಿಂಗ್ ಘೋಷಣೆ

| Published : Mar 25 2024, 12:51 AM IST / Updated: Mar 25 2024, 03:24 PM IST

ಸಾರಾಂಶ

ಕೇಂದ್ರ ಸಚಿವ ಜ। ವಿ.ಕೆ. ಸಿಂಗ್‌ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಗಾಜಿಯಾಬಾದ್‌: ಕೇಂದ್ರ ಸಚಿವ ಜ। ವಿ.ಕೆ. ಸಿಂಗ್‌ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.

‘ಒಬ್ಬ ಸೈನಿಕನಾಗಿ ನನ್ನ ಇಡೀ ಜೀವನವನ್ನು ಈ ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಕಳೆದ 10 ವರ್ಷಗಳಿಂದ ಗಾಜಿಯಾಬಾದ್ ಅನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವ ಕನಸನ್ನು ನನಸು ಮಾಡಲು ಅವಿರತವಾಗಿ ಶ್ರಮಿಸಿದ್ದೇನೆ. 

ಈ ವೇಳೆ ನಾನು ಕಠಿಣ, ಆದರೆ ಚಿಂತನಶೀಲ ನಿರ್ಧಾರವನ್ನು ಮಾಡಿದ್ದೇನೆ. 2024ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈ ನಿರ್ಧಾರ ನನಗೆ ಸುಲಭವಲ್ಲ, ಆದರೂ ಮುಂದೆ, ನಾನು ದೇಶಕ್ಕಾಗಿ ಮತ್ತು ಎಲ್ಲಾ ನಾಗರಿಕರಿಗೆ ನನ್ನ ಸೇವೆಯನ್ನು ಹೊಸ ರೂಪದಲ್ಲಿ ಮುಂದುವರಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.