ಸಾರಾಂಶ
ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ 112 ಭಾರತೀಯರನ್ನು ಹೊತ್ತ ಅಮೆರಿಕದ 3ನೇ ಸೇನಾ ವಿಮಾನ ಭಾನುವಾರ ರಾತ್ರಿ ಅಮೃತಸರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದರೊಂದಿಗೆ ಒಟ್ಟು 3 ಹಂತದಲ್ಲಿ 332 ಭಾರತೀಯ ವಲಸಿಗರನ್ನು ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿದಂತಾಗಿದೆ.
ಚಂಡೀಗಢ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ 112 ಭಾರತೀಯರನ್ನು ಹೊತ್ತ ಅಮೆರಿಕದ 3ನೇ ಸೇನಾ ವಿಮಾನ ಭಾನುವಾರ ರಾತ್ರಿ ಅಮೃತಸರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದರೊಂದಿಗೆ ಒಟ್ಟು 3 ಹಂತದಲ್ಲಿ 332 ಭಾರತೀಯ ವಲಸಿಗರನ್ನು ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿದಂತಾಗಿದೆ.
ಭಾನುವಾರ ರಾತ್ರಿ 10 ಗಂಟೆಗೆ ಆಗಮಿಸಿದ ವಿಮಾನದಲ್ಲಿದ್ದವರ ಪೈಕಿ 44 ಜನರು ಹರ್ಯಾಣ, 33 ಜನರು ಗುಜರಾತ್, 31ಜನರು ಪಂಜಾಬ್, ಇಬ್ಬರು ಉತ್ತರಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲಪ್ರದೇಶದ ತಲಾ ಒಬ್ಬರು ಇದ್ದರು. ಹೀಗೆ ಬಂದವರು ಅಗತ್ಯ ಕಾನೂನು ವಿಧಿ ಪೂರೈಸಿದ ಬಳಿಕ ಅವರವರ ತವರು ರಾಜ್ಯಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.ಫೆ.5ರಂದು 104 ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮೊದಲ ವಿಮಾನ ಅಮೃತಸರಕ್ಕೆ ಬಂದಿತ್ತು. ನಂತರ ಫೆ.15ರಂದು 116 ಜನರಿದ್ದ 2ನೇ ವಿಮಾನವನ್ನೂ ಭಾರತದಲ್ಲಿ ಬಂದಿಳಿದಿತ್ತು.