ಸಲ್ಲುಗೆ ಬೆದರಿಕೆ: ಕರ್ನಾಟಕದ ವ್ಯಕ್ತಿ ಬಂಧನ

| Published : Nov 06 2024, 12:46 AM IST

ಸಲ್ಲುಗೆ ಬೆದರಿಕೆ: ಕರ್ನಾಟಕದ ವ್ಯಕ್ತಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸಹೋದರ ಅನ್ಮೋಲ್‌ ಬಿಷ್ಣೋಯಿ ಹೆಸರಿನಲ್ಲಿ ಬೆದರಿಕೆ ಒಡ್ಡಿ 5 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ.

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸಹೋದರ ಅನ್ಮೋಲ್‌ ಬಿಷ್ಣೋಯಿ ಹೆಸರಿನಲ್ಲಿ ಬೆದರಿಕೆ ಒಡ್ಡಿ 5 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ.

ಈತನನ್ನು ಕರ್ನಾಟಕದ ವಿಕ್ರಂ (35) ಎಂದು ಗುರುತಿಸಲಾಗಿದ್ದು, ವಿಚಾರಣೆಗೆಂದು ಆತನನ್ನು ಮಹಾರಾಷ್ಟ್ರ ಪೊಲೀಸರು ಕರ್ನಾಟಕದಿಂದ ಮುಂಬೈಗೆ ಕರೆದೊಯ್ದಿದ್ದಾರೆ.

ಮುಂಬೈನ ವರ್ಲಿ ಪೊಲೀಸ್ ಕಂಟ್ರೋಲ್‌ ರೂಂಗೆ ಅನ್ಮೋಲ್‌ ಹೆಸರಲ್ಲಿ ಈತ ಸಂದೇಶ ಕಳಿಸಿದ್ದ. ‘ಸಲ್ಮಾನ್‌ ಜೀವಂತವಾಗಿರಲು ಬಯಸಿದರೆ ಬಿಷ್ಣೋಯಿ ಸಮುದಾಯದ ದೇವಸ್ಥಾನಕ್ಕೆ ಹೋಗಿ, ಕೃಷ್ಣಮೃಗವನ್ನು ಕೊಂದದ್ದಕ್ಕೆ ಕ್ಷಮೆ ಯಾಚಿಸಬೇಕು. ಇಲ್ಲವೇ 5 ಕೋಟಿ ರು. ಕೊಡಬೇಕು. ಹೀಗೆ ಮಾಡದಿದ್ದಲ್ಲಿ ನಾವು ಆತನನ್ನು ಕೊಲ್ಲುತ್ತೇವೆ. ನಮ್ಮ ಗ್ಯಾಂಗ್‌ ಇನ್ನೂ ಸಕ್ರಿಯವಾಗಿದೆ’ ಎಂದು ಬೆದರಿಸಿದ್ದ.

ಈ ಹಿನ್ನೆಲೆಯಲ್ಲಿ ಸಲ್ಮಾನ್‌ಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.