ಟಿಕ್‌ಟಾಕ್‌ ಸ್ಟಾರ್‌ ವಿಡಿಯೋದ ಪರಿಣಾಮ : ಐಸ್‌ಲ್ಯಾಂಡ್‌ನಲ್ಲಿ ಸೌತೆಕಾಯಿ ಸೋಲ್ಡೌಟ್‌

| Published : Aug 24 2024, 01:15 AM IST / Updated: Aug 24 2024, 05:52 AM IST

ಸಾರಾಂಶ

ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಕೃಷಿ ವಸ್ತುಗಳ ಕೊರತೆ ಕಾಣಿಸಿಕೊಳ್ಳುವುದು ಸಹಜ. ಆದರೆ ದೂರದ ಐಸ್‌ಲ್ಯಾಂಡ್‌ ದೇಶದಲ್ಲಿ ಟಿಕ್‌ಟಾಕ್‌ ಸ್ಟಾರ್‌ ಒಬ್ಬನ ವಿಡಿಯೋದ ಪರಿಣಾಮ ಇಡೀ ದೇಶದಲ್ಲಿನ ಸೌತೇಕಾಯಿ ಪೂರ್ತಿ ಮಾರಾಟವಾಗಿ, ಕೊರತೆ ಕಾಣಿಸಿಕೊಂಡ ಅಚ್ಚರಿ ಘಟನೆ ನಡೆದಿದೆ.

ನವದೆಹಲಿ: ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಕೃಷಿ ವಸ್ತುಗಳ ಕೊರತೆ ಕಾಣಿಸಿಕೊಳ್ಳುವುದು ಸಹಜ. ಆದರೆ ದೂರದ ಐಸ್‌ಲ್ಯಾಂಡ್‌ ದೇಶದಲ್ಲಿ ಟಿಕ್‌ಟಾಕ್‌ ಸ್ಟಾರ್‌ ಒಬ್ಬನ ವಿಡಿಯೋದ ಪರಿಣಾಮ ಇಡೀ ದೇಶದಲ್ಲಿನ ಸೌತೇಕಾಯಿ ಪೂರ್ತಿ ಮಾರಾಟವಾಗಿ, ಕೊರತೆ ಕಾಣಿಸಿಕೊಂಡ ಅಚ್ಚರಿ ಘಟನೆ ನಡೆದಿದೆ.

ಟಿಕ್‌ಟಾಕ್ ಸ್ಟಾರ್‌ ಲಾಗನ್ ಮೊಫಿಟ್‌ ಏಷ್ಯಾದ ಸ್ವಾದ ಹೊಂದಿರುವ ಸಲಾಡ್‌ ಮಾಡುವುದರ ಕುರಿತು ವಿಡಿಯೋ ಮಾಡಿದ್ದರು. ಸೋಯಾ ಸಾಸ್ ಮತ್ತು ಎಳ್ಳೆಣ್ಣೆ, ಸೌತೆಕಾಯಿ ಬಳಸಿ ಮಾಡುವ ಈ ಸಲಾಡ್ ತಯಾರಿಕೆ ವಿಡಿಯೋವನ್ನು ಹಂಚಿಕೊಂಡಿದ್ದರು.

ಈ ವಿಡಿಯೋ ಮೆಚ್ಚಿದ ಐಸ್‌ಲ್ಯಾಂಡ್‌ ಜನತೆ ಸೌತೆಕಾಯಿ ಖರೀದಿಗೆ ದಿನಸಿ ಅಂಗಡಿಗಳಿಗೆ ಮುಗಿ  ಬೀಳುತ್ತಿದ್ದು, ಪರಿಣಾಮ, ಸೌತೆಕಾಯಿ ಕೊರತೆ ಎದುರಾಗಿದೆ. ವ್ಯಾಪಾರಿಗಳು ಜನರ ಬೇಡಿಕೆ ಪೂರೈಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ವಿಚಾರ ಹೊರ ಬಿದ್ದಿದೆ. ಐಸ್‌ಲ್ಯಾಂಡ್‌ ತನ್ನ ಬಹುತೇಕ ಬೇಡಿಕೆಗಳಿಗೆ ವಿದೇಶಗಳನ್ನೇ ಅವಲಂಬಿಸಿದೆ.