ದೇಶದಲ್ಲಿ ಮೊದಲ ಬುಲೆಟ್‌ ರೈಲು ಸಂಚರಿಸುವ ಸಮಯ ದೂರವಿಲ್ಲ: ಪ್ರಧಾನಿ ನರೇಂದ್ರ ಮೋದಿ

| Published : Jan 07 2025, 12:34 AM IST / Updated: Jan 07 2025, 04:25 AM IST

ಸಾರಾಂಶ

‘ಭಾರತದಲ್ಲಿ ಮೊದಲ ಬುಲೆಟ್‌ ರೈಲು ಸಂಚರಿಸುವ ಸಮಯ ದೂರವಿಲ್ಲ. ಇದು ಐತಿಹಾಸಿಕ ಬದಲಾವಣೆ ಆಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹಾಗೂ ಜನರ ಬಹುಬೇಡಿಕೆಯ ಹೈಸ್ಪೀಡ್‌ ರೈಲು ಸಂಚಾರ ಸಾಕಾರವಾಗಲಿದೆ ಎಂದು ಭರವಸೆ ನೀಡಿದ್ದಾರೆ.

 ನವದೆಹಲಿ : ‘ಭಾರತದಲ್ಲಿ ಮೊದಲ ಬುಲೆಟ್‌ ರೈಲು ಸಂಚರಿಸುವ ಸಮಯ ದೂರವಿಲ್ಲ. ಇದು ಐತಿಹಾಸಿಕ ಬದಲಾವಣೆ ಆಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹಾಗೂ ಜನರ ಬಹುಬೇಡಿಕೆಯ ಹೈಸ್ಪೀಡ್‌ ರೈಲು ಸಂಚಾರ ಸಾಕಾರವಾಗಲಿದೆ ಎಂದು ಭರವಸೆ ನೀಡಿದ್ದಾರೆ. 

ಜಮ್ಮು ರೈಲ್ವೆ ವಿಭಾಗದ ಉದ್ಘಾಟನೆ ಸೇರಿದಂತೆ ದೇಶದ ಹಲವು ರೈಲು ಕಾಮಗಾರಿಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ‘ ಜನರು ಹೆಚ್ಚು ದೂರವನ್ನು ಕ್ರಮಿಸಲು ಕಡಿಮೆ ಸಮಯವನ್ನು ಬಯಸುತ್ತಾರೆ. ಇದು ಹೈಸ್ಪೀಡ್‌ ರೈಲು ಸಂಚಾರದ ಬೇಡಿಕೆ ಹೆಚ್ಚಳಕ್ಕೆ ಕಾರಣ. ಈಗಾಗಲೇ 136ಕ್ಕೂ ಹೆಚ್ಚು ರೈಲುಗಳು 50 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ದೇಶದಲ್ಲಿ ಬುಲೆಟ್‌ ರೈಲುಗಳು ಓಡಾಡುವ ಸಮಯ ದೂರವಿಲ್ಲ. ಭಾರತದ ರೈಲ್ವೆ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಲಿದೆ.’ ಎಂದರು.

‘ಹೊಸ ವರ್ಷದಲ್ಲಿ ಭಾರತವು ಸಂಪರ್ಕದಲ್ಲಿ ವೇಗ ಪಡೆದುಕೊಂಡಿದೆ. ದೇಶದ ಅನೇಕ ಮಾರ್ಗಗಳಿಗೆ ಹೊಸ ಯುಗದ ಸಂಪರ್ಕದಲ್ಲಿ ಇದು ಪ್ರಮುಖ ದಿನವಾಗಿದೆ. ಇಡೀ ದೇಶ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ದತ್ತ ಹೆಜ್ಜೆ ಇಡುತ್ತಿದೆ’ ಎಂದರು.ಇದೇ ವೇಳೆ ಮೋದಿ, ‘ಮೂಲ ಸೌಕರ್ಯಗಳ ಆಧುನೀಕರಣ, ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸುವುದು, ದೇಶದ ಎಲ್ಲ ಭಾಗಗಳಿಗೆ ಸಂಪರ್ಕವನ್ನು ಹೆಚ್ಚಿಸುವುದು, ಉದ್ಯೋಗ ಮತ್ತು ಉದ್ಯಮವನ್ನು ಬೆಂಬಲಿಸುವುದು- ಇವು ರೈಲು ಕ್ಷೇತ್ರದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಯೋಜನೆಗಳು’ ಎಂದು ಹೇಳಿದರು.