ತೆಲಂಗಾಣ ಶಾಸಕಿ ಝಕಿಯಾ ಖಾನಂರಿಂದ ತಿರುಪತಿ ವಿಐಪಿ ಬ್ರೇಕ್‌ ದರ್ಶನ ಟಿಕೆಟ್‌ ವಂಚನೆ

| Published : Oct 22 2024, 12:13 AM IST / Updated: Oct 22 2024, 05:02 AM IST

ಸಾರಾಂಶ

ತಿರುಮಲದಲ್ಲಿ ವಾರಾಂತ್ಯದಲ್ಲಿ ಹೆಚ್ಚು ಬೇಡಿಕೆಯಿರುವ ವಿಐಪಿ ಬ್ರೇಕ್‌ ದರ್ಶನ ಟಿಕೆಟ್‌ಗಳನ್ನು ಬ್ಲ್ಯಾಕ್‌ ಮಾರ್ಕೆಟಿಂಗ್ ಮಾಡಿದ ಆರೋಪದಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಎಂಎಲ್‌ಸಿ ಝಕಿಯಾ ಖಾನಂ, ಅವರ ಪಿಆರ್‌ಒ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಿರುಪತಿ: ತಿರುಮಲದಲ್ಲಿ ವಾರಾಂತ್ಯದಲ್ಲಿ ಹೆಚ್ಚು ಬೇಡಿಕೆಯಿರುವ ವಿಐಪಿ ಬ್ರೇಕ್‌ ದರ್ಶನ ಟಿಕೆಟ್‌ಗಳನ್ನು ಬ್ಲ್ಯಾಕ್‌ ಮಾರ್ಕೆಟಿಂಗ್ ಮಾಡಿದ ಆರೋಪದಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಎಂಎಲ್‌ಸಿ ಝಕಿಯಾ ಖಾನಂ, ಅವರ ಪಿಆರ್‌ಒ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಮೂವರು ಆರೋಪಿಗಳು, ಬೆಂಗಳೂರಿನ ಭಕ್ತರಾದ ಎನ್‌. ಸಾಯಿಕುಮಾರ್‌ ಎಂಬುವರ ಕುಟುಂಬದಿಂದ 65 ಸಾವಿರ ರು. ಪೀಕಿ ವಿಐಪಿ 6 ಬ್ರೇಕ್‌ ದರ್ಶನ ಟಿಕೆಟ್‌ಗಳನ್ನು ಹಾಗೂ 1 ವೇದ ಆಶೀರ್ವಾದಂ ಟಿಕೆಟ್‌ ಮಾರಿದ್ದರು. ಆದರೆ ಇದರ ಮೂಲ ಮೌಲ್ಯ 10,500 ರು. ಮಾತ್ರ ಆಗಿತ್ತು. ಹೀಗಾಗಿ, ‘ಬೇಕಾಬಿಟ್ಟಿ ಮೊತ್ತಕ್ಕೆ ಟಿಕೆಟ್‌ಗಳನ್ನು ಮಾರಿ ವಂಚಿಸಲಾಗುತ್ತಿದೆ’ ಎಂದು ಖುದ್ದು ಸಾಯಿಕುಮಾರ್‌ ಅವರು ಟಿಟಿಡಿ ಜಾಗೃತ ದಳಕ್ಕೆ ದೂರು ಸಲ್ಲಿಸಿದ್ದರು. 

ಹೀಗಾಗಿ ವೈಎಸ್‌ಆರ್‌ಸಿಪಿ ಎಂಎಲ್‌ಸಿ ಖಾನಂ, ಪಿ ಚಂದ್ರಶೇಖರ್ ಎಂಬ ಮಧ್ಯವರ್ತಿ, ಶಾಸಕಿಯ ಪಿಆರ್‌ಒ ಕೃಷ್ಣ ತೇಜ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.ಆದರೆ ಈ ಆರೋಪವನ್ನು ಖಾನಂ ತಳ್ಳಿಹಾಕಿದ್ದು, ಇದು ನಮ್ಮ ವಿರುದ್ಧ ನಾಯ್ಡು ಸರ್ಕಾರ ಸೇಡಿನ ಮನೋಭಾವನೆ ತಾಳಿದೆ ಎಂದಿದ್ದಾರೆ.

 ‘ನನ್ನ ಲೆಟರ್‌ ಹೆಡ್‌ ಮೂಲಕ ವಿಐಪಿ ಬ್ರೇಕ್‌ ದರ್ಶನ ಟಿಕೆಟ್‌ಗೆ ಶಿಫಾರಸು ಮಾಡಲಾಗಿತ್ತು. ಅದಾದ ನಂತರ ಮಧ್ಯವರ್ತಿಗಳು ಈ ಲೆಟರ್‌ಹೆಡ್‌ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಹಣಕ್ಕೆ ಟಿಕೆಟ್‌ ಮಾರಿದ್ದಾರೆ. ಈ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ’ ಎಂದಿದ್ದಾರೆ.