ಪ್ರಶ್ನೆಗಾಗಿ ಲಂಚ: ಕೇಸ್‌ ಅ.31ಕ್ಕೆ ವಿಚಾರಣೆಗೆ ಬರಲು ಸಂಸದೆ ಮಹುವಾಗೆ ಸಮನ್ಸ್‌

| Published : Oct 27 2023, 12:30 AM IST

ಪ್ರಶ್ನೆಗಾಗಿ ಲಂಚ: ಕೇಸ್‌ ಅ.31ಕ್ಕೆ ವಿಚಾರಣೆಗೆ ಬರಲು ಸಂಸದೆ ಮಹುವಾಗೆ ಸಮನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂಬ ಪ್ರಕರಣ ಅತ್ಯಂತ ಗಂಭೀರ ಎಂದಿರುವ ಸಂಸತ್ತಿನ ನೈತಿಕ ಸಮಿತಿ, ಈ ಕುರಿತು ವಿಚಾರಣೆಗಾಗಿ ಅ.31ರಂದು ತನ್ನ ಮುಂದೆ ಹಾಜರಾಗುವಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಮನ್ಸ್‌ ಜಾರಿ ಮಾಡಿದೆ.
ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂಬ ಪ್ರಕರಣ ಅತ್ಯಂತ ಗಂಭೀರ ಎಂದಿರುವ ಸಂಸತ್ತಿನ ನೈತಿಕ ಸಮಿತಿ, ಈ ಕುರಿತು ವಿಚಾರಣೆಗಾಗಿ ಅ.31ರಂದು ತನ್ನ ಮುಂದೆ ಹಾಜರಾಗುವಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಮನ್ಸ್‌ ಜಾರಿ ಮಾಡಿದೆ. ಅಲ್ಲದೆ ಪ್ರಕರಣದ ವಿಚಾರಣೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವು ಪಡೆಯುವುದಾಗಿ ಶಿಸ್ತು ಸಮಿತಿ ಅಧ್ಯಕ್ಷ, ಬಿಜೆಪಿ ಸಂಸದ ವಿನೋದ್‌ ಕುಮಾರ್‌ ಸೋನ್‌ಕರ್‌ ತಿಳಿಸಿದ್ದಾರೆ. ಈ ನಡುವೆ ಮಹುವಾ ಕುರಿತು ಹಲವು ಗಂಭೀರ ಆರೋಪ ಮಾಡಿದ್ದ ಬಿಜೆಪಿ ಸಂಸದ ಮತ್ತು ದೂರುದಾರ ನಿಶಿಕಾಂತ್‌ ದುಬೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು.