ಮೋದಿ, ತಾಯಿಯ ಬಗ್ಗೆ ಕೀಳು ನುಡಿ:ತ.ನಾಡು ಸಚಿವನ ವಿರುದ್ಧ ಕೇಸ್‌

| Published : Mar 26 2024, 01:08 AM IST

ಮೋದಿ, ತಾಯಿಯ ಬಗ್ಗೆ ಕೀಳು ನುಡಿ:ತ.ನಾಡು ಸಚಿವನ ವಿರುದ್ಧ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ದಿ.ಹೀರಾಬೆನ್‌ ವಿರುದ್ಧ ಕೇಳು ನುಡಿಗಳನ್ನು ಆಡಿದ್ದ ತಮಿಳುನಾಡಿನ ಡಿಎಂಕೆ ಸಚಿವ ಅನಿತಾ ರಾಧಾಕೃಷ್ಣನ್‌ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ದಿ.ಹೀರಾಬೆನ್‌ ವಿರುದ್ಧ ಕೇಳು ನುಡಿಗಳನ್ನು ಆಡಿದ್ದ ತಮಿಳುನಾಡಿನ ಡಿಎಂಕೆ ಸಚಿವ ಅನಿತಾ ರಾಧಾಕೃಷ್ಣನ್‌ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೂತ್ತುಕುಡಿ ದಕ್ಷಿಣದ ಬಿಜೆಪಿ ಅಧ್ಯಕ್ಷ ಸಿದ್ರಾಂಗದನ್‌ ಈ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಡಿಎಂಕೆ ಸಚಿವ ಅನಿತಾ ರಾಧಾಕೃಷ್ಣನ್‌ ಅವರ ಹೇಳಿಕೆ ಖಂಡನೀಯ. ಇವರ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‌ 294 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.