ಸಾರಾಂಶ
ಕೋಟಾ: ದಂಪತಿ ತಮ್ಮ 3 ವರ್ಷದ ಮಗಳನ್ನು ಮರೆತು ಕಾರಿನಲ್ಲೇ ಬಿಟ್ಟು ಮದುವೆ ಮನೆಗೆ ಹೋದ ಪರಿಣಾಮ ಅದು ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಗೋರ್ವಿಕಾ ನಗರ್ (3) ಮೃತಪಟ್ಟ ಮಗು.
ಪ್ರದೀಪ್ ನಗರ್ ತಮ್ಮ ಪತ್ನಿ ಇಬ್ಬರು ಮಕ್ಕಳು ಜೊತೆ ಬುಧವಾರ ಸಂಜೆ ಮದುವೆ ಕಾರ್ಯಕ್ರಮಕ್ಕೆಂದು ಜೋರವಾರ್ಪುರಕ್ಕೆ ತೆರಳಿದ್ದರು. ಈ ವೇಳೆ ಪ್ರದೀಪ್‌ರ ಪತ್ನಿ ಹಿರಿಯ ಮಗಳ ಜೊತೆ ಇಳಿದು ಕಾರಿನಿಂದ ಕಾರ್ಯಕ್ರಮದ ಹಾಲ್‌ಗೆ ತೆರಳಿದ್ದಾರೆ. ಬಳಿಕ ಪ್ರದೀಪ್ ಕಾರನ್ನು ಪಾರ್ಕ್ ಮಾಡಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಕಿರಿಯ ಪುತ್ರಿ ಪತ್ನಿಯ ಜೊತೆ ಹೋಗಿರಬಹುದು ಎಂದು ಪ್ರದೀಪ್ ಸುಮ್ಮನಿದ್ದರು. ಇನ್ನೊಂದೆಡೆ ಪುತ್ರಿ ಪತಿಯ ಜೊತೆ ಇರಬಹುದು ಎಂದು ಪತ್ನಿಯೂ ಸುಮ್ಮನಾಗಿದ್ದರೆ. ಮದುವೆ ಕಾರ್ಯಕ್ರಮದಲ್ಲಿ ಹಲವು ಗಂಟೆಗಳ ಕಾಲ ಪತಿ, ಪತ್ನಿ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿ ಇದ್ದ ಕಾರಣ ಪುತ್ರಿ ಕಾರಿನಲ್ಲೇ ಉಳಿದ ವಿಷಯ ಇಬ್ಬರಿಗೂ ಗೊತ್ತಾಗಿಲ್ಲ. ಕೊನೆಗೆ ವಿಷಯ ಅರಿವಾಗಿ ಬಂದು ನೋಡುವ ವೇಳೆ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದು ಕಂಡುಬಂದಿದೆ.