ಸಾರಾಂಶ
ವಾಷಿಂಗ್ಟನ್: ಯೆಮೆನ್‌ನ ಹೌತಿ ಉಗ್ರರ ಮೇಲೆ ವಾಯುದಾಳಿಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ಪ್ರಮುಖರ ಜತೆ ಚರ್ಚಿಸಲು ‘ಸಿಗ್ನಲ್’ ಆ್ಯಪ್‌ನಲ್ಲಿ ರಚಿಸಿಕೊಂಡಿದ್ದ ಗ್ರೂಪ್‌ಗೆ ಆಕಸ್ಮಿಕವಾಗಿ ಪತ್ರಕರ್ತರೊಬ್ಬರು ಸೇರ್ಪಡೆಗೊಂಡ ಪ್ರಸಂಗ ನಡೆದಿದೆ. ಅಲ್ಲದೆ ಅದರಲ್ಲಿನ ಚಾಟಿಂಗ್ ಮಾಹಿತಿ ಸೋರಿಕೆ ಆಗಿದೆ.
ಅಟ್ಲಾಂಟಿಕ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್ ಅವರು ಈ ಗುಂಪಿಗೆ ಸೇರಿದದ ಪತ್ರಕರ್ತ. ಶ್ವೇತಭವನದ ಅಧಿಕಾರಿಯೊಬ್ಬರೇ ಅವರನ್ನು ಸೇರಿಸಿದ್ದರು ಎನ್ನಲಾಗಿದೆ. ಈ ಎಡವಟ್ಟು ಬೆಳಕಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಶ್ವೇತಭವನ, ‘ಗ್ರೂಪ್ ನಲ್ಲಿ ಅತಿ ಸೂಕ್ಷ್ಮ ವಿಚಾರ ಚರ್ಚಿಸಿಲ್ಲ. ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿಲ್ಲ’ ಎಂದು ಹೇಳಿದೆ.
ಆದರೆ ಅಟ್ಲಾಂಟಿಕ್ ಬುಧವಾರ ಗ್ರೂಪ್ ಚಾಟ್ ಅನ್ನೆಲ್ಲ ಬಹಿರಂಗಪಡಿಸಿದೆ.
ಗಬ್ಬಾರ್ಡ್ ವಿಚಾರಣೆ:
ಈ ಹಿನ್ನೆಲೆಯಲ್ಲಿ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರನ್ನು ಅಮೆರಿಕ ಸಂಸದೀಯ ಸಮಿತಿ ವಿಚಾರಣೆಗೆ ಒಳಪಡಿಸಿದೆ.