ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯ ಯುವಜನತೆಗೆ ಹೊಸ ಅವಕಾಶಗಳ ಸೃಷ್ಟಿಗೆ ಭಾರತ ವಿವಿಧ ರಾಷ್ಟ್ರಗಳ ಜತೆ ವ್ಯಾಪಾರ, ಚಲನಶೀಲತೆ ಒಪ್ಪಂದಗಳಿಗೆ ಪದಾರ್ಪಣೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ನವದೆಹಲಿ: ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯ ಯುವಜನತೆಗೆ ಹೊಸ ಅವಕಾಶಗಳ ಸೃಷ್ಟಿಗೆ ಭಾರತ ವಿವಿಧ ರಾಷ್ಟ್ರಗಳ ಜತೆ ವ್ಯಾಪಾರ, ಚಲನಶೀಲತೆ ಒಪ್ಪಂದಗಳಿಗೆ ಪದಾರ್ಪಣೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ದೇಶದ 45 ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ 18ನೇ ರೋಜ್‌ಗಾರ್‌ ಮೇಳದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ಪ್ರಧಾನಿ ಮೋದಿ, ವರ್ಚವಲ್‌ ಮೂಲಕ 61 ಸಾವಿರ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿ ಮಾತನಾಡಿದರು. ಭಾರತ ವಿಶ್ವದಲ್ಲೇ ಹೆಚ್ಚು ಯುವಜನತೆ ಹೊಂದಿದ ರಾಷ್ಟ್ರ. ಇವರಿಗಾಗಿ ಹೊಸ ಅವಕಾಶಗಳ ಸೃಜಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈ ನೇಮಕಾತಿ ಪತ್ರಗಳನ್ನು ಆಹ್ವಾನ ಪತ್ರಿಕೆಗಳಾಗಿ ಪರಿಗಣಿಸಿ ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಜೊತೆಯಾಗಬೇಕು ಎಂದು ಪ್ರಧಾನಿ ಕರೆ ನೀಡಿದರು.

==

ರೀಲ್ಸ್‌ಗಾಗಿ ವಂದೇ ಭಾರತ್‌

ತಡೆದು ದುಷ್ಕೃತ್ಯ: ಆಕ್ರೋಶ

ನವದೆಹಲಿ: ರೀಲ್ಸ್‌ ಹುಚ್ಚಿಗಾಗಿ ಯುವಕರ ಗುಂಪೊಂದು ವಂದೇ ಭಾರತ್‌ ಬರುವ ಹಳಿಯ ಮೇಲೆ ಮರದ ದಿಮ್ಮಿಯನ್ನಿಟ್ಟು ರೈಲನ್ನು ತಡೆದು ಆ ವಿಡಿಯೋವನ್ನು ಜಾಲತಾಣದಲ್ಲಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ರೀಲ್ಸ್‌ನಲ್ಲಿ 5 ಯುವಕರು ಮರದ ದಿಮ್ಮಿಯನ್ನು ಹಳಿಗೆ ಅಡ್ಡಲಾಗಿ ಇಟ್ಟಿದ್ದನ್ನು ಕಾಣಬಹುದು. ಸ್ವಲ್ಪ ಹೊತ್ತಿನ ಬಳಿಕ ಆ ಮಾರ್ಗದಲ್ಲಿ ವೇಗವಾಗಿ ಬಂದ ವಂದೇ ಭಾರತ್‌ ರೈಲು ಅನಿವಾರ್ಯವಾಗಿ ನಿಲ್ಲುತ್ತದೆ. ಇದನ್ನು ಕಂಡು ‘ವಂದೇ ಭಾರತ್‌ ಅನ್ನು ನಿಲ್ಲಿಸಿಬಿಟ್ಟೆವು. ರೈಲು ಹತ್ತಲು ಅಲ್ಲ, ವಿಡಿಯೋಗಾಗಿ ಹೀಗೆ ಮಾಡಿದೆವು’ ಎಂದು ಯುವಕರು ಕೂಗುವುದು ಕೇಳುತ್ತದೆ. ಆದರೆ ಈ ಘಟನೆ ಎಲ್ಲಿ ನಡೆದದ್ದೆಲ್ಲೆಂದು ತಿಳಿದುಬಂದಿಲ್ಲ.ಆಕ್ರೋಶ: ನೂರಾರು ಜನ ಪ್ರಯಾಣಿಸುತ್ತಿರುವ ಹೈ-ಸ್ಪೇಡ್‌ ರೈಲನ್ನು ಈ ರೀತಿ ನಿಲ್ಲಿಸಿ ಅವರ ಜೀವವನ್ನು ಅಪಾಯಕ್ಕೆ ತಳ್ಳುವುದು ಉಗ್ರಕೃತ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಟ್ಯಾಗ್‌ ಮಾಡಿ ಆ ಯುವಕರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. 1989ರ ರೈಲ್ವೆ ಕಾಯ್ದೆಯ 150ನೇ ವಿಧಿಯ ಪ್ರಕಾರ ಹೀಗೆ ಮಾಡುವವರಿಗೆ ಜೀವಾವಧಿ ಅಥವಾ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.