ಸಾರಾಂಶ
ಪಿಟಿಐ ಮಾಲೆಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ದ್ವೀಪದೇಶ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಉಭಯ ದೇಶಗಳ ಬಿಕ್ಕಟ್ಟಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಎರಡೂ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ.
ಇದರ ದ್ಯೋತಕವಾಗಿ ಮೋದಿ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಜತೆ ದ್ವಿಪಕ್ಷೀಯ ಸಭೆ ನಡೆಸಿ 4,850 ಕೋಟಿ ರು. ಸಾಲ ಘೋಷಿಸಿದ್ದಾರೆ. ಭಾರತ-ಮಾಲ್ಡೀವ್ಸ್ 8 ಒಪ್ಪಂದ ಮಾಡಿಕೊಂಡಿವೆ. ಈ ವೇಳೆ ಮೋದಿ, ‘ಭಾರತ-ಮಾಲ್ಡೀವ್ಸ್ ಸಂಬಂಧ 60 ವರ್ಷ ಹಳೆಯದಾಗಿದ್ದು ಸಮುದ್ರದಷ್ಟು ಆಳವಾಗಿದೆ’ ಎಂದು ಹರ್ಷಿಸಿದ್ದಾರೆ.ಈ ಹಿಂದೆ ಮೋದಿ ಲಕ್ಷದ್ವೀಪ ಪ್ರವಾಸ ಕೈಗೊಂಡು ಪ್ರವಾಸೋದ್ಯಮ ಪ್ರಚಾರಕ್ಕೆ ಮುಂದಾಗಿದ್ದರು. ಇದರಿಂದ ತಮ್ಮ ಪ್ರವಾಸೋದ್ಯಮಕ್ಕೆ ಹೊಡೆತ ನಿಶ್ಚಿತ ಎಂದು ಭಾವಿಸಿದ್ದ ಮಾಲ್ಡೀವ್ಸ್‌ನ ಕೆಲವು ಸಚಿವರು, ಭಾರತ ಹಾಗೂ ಮೋದಿ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ, ಭಾರತ ವಿರೋಧಿ ಎಂದೇ ಬಿಂಬಿತರಾಗಿದ್ದ ಅಧ್ಯಕ್ಷ ಮುಯಿಜು, ಮಾಲ್ಡೀವ್ಸ್ ಸಹಾಯಕ್ಕೆಂದು ಅಲ್ಲಿ ತಂಗಿದ್ದ ಭಾರತೀಯ ಸೇನೆಯನ್ನು ವಾಪಸ್ ಕಳಿಸಿದ್ದರು. ಆದರೆ ಮಾಲ್ಡೀವ್ಸ್ ಈ ನಡೆಯಿಂದ ಕುಪಿತರಾಗಿದ್ದ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿದ್ದರು. ಇದರಿಂದ ದ್ವೀಪದೇಶದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಬಳಿಕ ತಣ್ಣಗಾಗಿದ್ದ ಮುಯಿಜು ಮೋದಿ ಓಲೈಕೆ ಮಾಡಿದ್ದರು.