ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಾರಿಗೆ ವಾಹನಗಳ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು, ವರ್ಷಕ್ಕೆ 5 ಅಥವಾ ಹೆಚ್ಚು ಬಾರಿ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ಅಮಾನತು ಮಾಡುವ ನಿಯಮವನ್ನು ಜಾರಿಗೊಳಿಸಿದೆ.

-ಅಪಘಾತ ತಡೆಗೆ ಕೇಂದ್ರದಿಂದ ಕಠಿಣ ಕ್ರಮ

-ಜ.20ರಿಂದಲೇ ಕಟ್ಟುನಿಟ್ಟಿನ ನಿಯಮ ಜಾರಿ

ನವದೆಹಲಿ: ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಾರಿಗೆ ವಾಹನಗಳ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು, ವರ್ಷಕ್ಕೆ 5 ಅಥವಾ ಹೆಚ್ಚು ಬಾರಿ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ಅಮಾನತು ಮಾಡುವ ನಿಯಮವನ್ನು ಜಾರಿಗೊಳಿಸಿದೆ.

ಇದಕ್ಕಾಗಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಹೊಸ ನಿಯಮದ ಪ್ರಕಾರ ವರ್ಷದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದಲ್ಲಿ, ಅಂಥವರ ಚಾಲನಾ ಪರವಾನಗಿ ಅಮಾನತುಗೊಳ್ಳಲಿದೆ. ಎಷ್ಟು ಅವಧಿಗೆ ಅಮಾನತು ಮಾಡಬೇಕು ಎಂಬುದನ್ನು ನಿಯಮಗಳ ಅನ್ವಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ಹೊಸ ನಿಯಮ ಜ.20ರಿಂದಲೇ ಜಾರಿಗೆ ಬಂದಿದ್ದು, ಜ.1 ಅಥವಾ ಅದರ ನಂತರ ನಡೆದ ನಿಯಮ ಉಲ್ಲಂಘನೆಗಳಿಗೆ ಅನ್ವಯವಾಗಲಿದೆ. ಇದುವರೆಗೆ ಓವರ್‌ ಲೋಡ್‌, ರ್‍ಯಾಷ್‌ ಡ್ರೈವಿಂಗ್‌ ಮತ್ತು ಪ್ರಯಾಣಿಕರ ಮೇಲೆ ಹಲ್ಲೆಯಂಥಹ ಕೃತ್ಯಗಳನ್ನು 24 ಬಾರಿ ಮಾಡಿದರೆ ಮಾತ್ರ ಪರವಾನಗಿ ರದ್ದಾಗುತ್ತಿತ್ತು. ಇದೀಗ ಹೆಲ್ಮೆಟ್‌ ಇಲ್ಲದೆ ಸಂಚಾರ, ಸಿಗ್ನಲ್‌ ಜಂಪ್ ಮಾಡುವುದು, ಸೀಟ್‌ಬೆಲ್ಟ್‌ ಧರಿಸದಿರುವಂತಹ ಸಣ್ಣ ಉಲ್ಲಂಘನೆಯೂ ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ.