ಸಾರಾಂಶ
ಬಿಜೆಪಿ ಸರ್ಕಾರ ಸೇರುವುದಾಗಿ ತ್ರಿಪುರಾದ ಪ್ರಮುಖ ಪ್ರತಿಪಕ್ಷವಾದ ಪ್ರದ್ಯೋತ್ ದೇಬ್ ಬರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷ ನಿರ್ಧರಿಸಿದೆ.
ಅಗರ್ತಲಾ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬುಧವಾರ ಮಹತ್ವದ ವಿದ್ಯಮಾನ ನಡೆದಿದ್ದು, ಪ್ರಮುಖ ವಿಪಕ್ಷವಾದ ತ್ರಿಪ್ರಾ ಮೋಥಾ, ಬಿಜೆಪಿ ಸರ್ಕಾರ ಸೇರಲು ನಿರ್ಧರಿಸಿದೆ.
ರಾಜವಂಶಜ ಪ್ರದ್ಯೋತ್ ದೇಬ್ ಬರ್ಮಾ ನೇತೃತ್ವದ ಪಕ್ಷವಾದ ತಿಪ್ರಾ ಮೋಥಾ ಲೋಕಸಭೆ ಚುನಾವಣೆಗೂ ಮುನ್ನ ತೆಗೆದುಕೊಂಡಿರುವ ಈ ನಿರ್ಣಯ, ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.60 ಸದಸ್ಯ ಬಲದ ವಿಧಾನಸಭೆಯಲ್ಲಿ ತಿಪ್ರಾ ಮೋಥಾ 13 ಶಾಸಕರನ್ನು ಹೊಂದಿದ್ದು, ರಾಜ್ಯ ಮಂತ್ರಿಮಂಡಲದಲ್ಲಿ 2 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ ಹೇಳಿದ್ದಾರೆ.