ಸಾರಾಂಶ
ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಸೇರಿ ಸರ್ಕಾರದ ಹಿರಿಯರ ಕೈವಾಡವಿದೆ ಎಂಬ ವರದಿಗೆ ಕಾರಣವಾದ ತಮ್ಮ ಸರ್ಕಾರದ ಅಧಿಕಾರಿಗಳನ್ನು ಕ್ರಿಮಿನಲ್‌ಗಳು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಟೀಕಿಸಿದ್ದಾರೆ.
ಒಟ್ಟಾವಾ: ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಸೇರಿ ಸರ್ಕಾರದ ಹಿರಿಯರ ಕೈವಾಡವಿದೆ ಎಂಬ ವರದಿಗೆ ಕಾರಣವಾದ ತಮ್ಮ ಸರ್ಕಾರದ ಅಧಿಕಾರಿಗಳನ್ನು ಕ್ರಿಮಿನಲ್‌ಗಳು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಟೀಕಿಸಿದ್ದಾರೆ.
ಬ್ರಾಂಪ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ‘ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ಮೋದಿ, ಜೈಶಂಕರ್ ಪಾತ್ರದ ಬಗ್ಗೆ ಮಾಧ್ಯಮ ವರದಿಗಳ ಕುರಿತು ಪ್ರಶ್ನಿಸಿದ ವೇಳೆ ‘ಕೆಲ ಕ್ರಿಮಿನಲ್‌ಗಳು ಸರ್ಕಾರ ಗೌಪ್ಯ ಮಾಹಿತಿಗಳನ್ನು ಮಾಧ್ಯಮದವರಿಗೆ ಸೋರಿಕೆ ಮಾಡುತ್ತಿದ್ದಾರೆ ಮತ್ತು ಅಂಥ ಮಾಹಿತಿ ತಪ್ಪಾಗಿ ಗ್ರಹಿಕೆಯಾಗಿ ತಪ್ಪು ವರದಿಗಳು ಪ್ರಕಟವಾಗುತ್ತಿವೆ. ಹೀಗಾಗಿಯೇ ನಾವು ವಿದೇಶಿ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸಿದೆವು. ಈ ವೇಳೆ ಇಂಥ ಮಾಹಿತಿ ಸೋರಿಕೆಯೇ ವಾಸ್ತವಕ್ಕೆ ದೂರವಾದುದು ಎಂದು ಪತ್ತೆಯಾಗಿದೆ’ ಎಂದು ಪ್ರಧಾನಿ ಟ್ರುಡೋ ಹೇಳಿದ್ದಾರೆ.ಇತ್ತೀಚೆಗೆ, ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಭಾರತದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರಿಗೆ ತಿಳಿದಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿ ಹೇಳಿರುವುದಾಗಿ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ವರದಿ ಮಾಡಿತ್ತು. ಆದರೆ ಇದನ್ನು ಟ್ರುಡೋರ ಗುಪ್ತಚರ ಸಲಹೆಗಾರ ಅಲ್ಲಗಳೆದಿದ್ದರು.