ಸಾರಾಂಶ
- ಪ್ರಕರಣಗಳ ತನಿಖೆಗೆ ಟ್ರಂಪ್ ಆದೇಶ- ಕಮ್ಮಿ ವೇತನ, ಖೊಟ್ಟಿ ಹುದ್ದೆ ಸೃಷ್ಟಿ ಬಗ್ಗೆ ತನಿಖೆ
ಪಿಟಿಐ ನ್ಯೂಯಾರ್ಕ್ಎಚ್-1ಬಿ ವೀಸಾ ದುರುಪಯೋಗ ತಡೆಗಟ್ಟಲು ಕಠಿಣ ಕ್ರಮ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು, ಕಡಿಮೆ ವೇತನ, ಹುದ್ದೆಯೇ ಇಲ್ಲದೆ ವೀಸಾ ವಿತರಣೆ, ವೀಸಾ ಹೊಂದಿದ ನೌಕರರನ್ನು ಕೆಲಸಕ್ಕೆ ನೇಮಿಸಿಕೊಂಡರೂ ಅಂತಿಮ ಆದೇಶ ಕೊಡದೇ ಖಾಲಿ ಕೂರಿಸುವುದು (ಬೆಂಚಿಂಗ್)... ಸೇರಿದಂತೆ 175 ಪ್ರಕರಣಗಳ ತನಿಖೆಗೆ ಆದೇಶಿಸಿದೆ. ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ರಕ್ಷಿಸುವ ಭಾಗವಾಗಿ ಈ ತನಿಖೆ ನಡೆಸಲಾಗುತ್ತಿದೆ. ಅಧ್ಯಕ್ಷ ಟ್ರಂಪ್ ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಲೋರಿ ಚಾವೆಜ್ ಡೆರಿಮೆರ್ ಅವರ ನಾಯಕತ್ವದಲ್ಲಿ, ಅಮೆರಿಕದವರಿಗೆ ನೌಕರಿ ಮೊದಲು ಎಂಬ ಗುರಿಯೊಂದಿಗೆ ಇಲಾಖೆ ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಅಮೆರಿಕದ ಎಚ್-1ಬಿ ವೀಸಾ ಪಡೆದವರಲ್ಲಿ ಭಾರತದ ಐಟಿ ಉದ್ಯೋಗಿಗಳು ಮತ್ತು ವೈದ್ಯರು ಮುಂಚೂಣಿಯಲ್ಲಿದ್ದಾರೆ. ಆದರೆ ಸದ್ಯ ತನಿಖೆಗೆ ಆದೇಶಿಸಿರುವ 175 ಪ್ರಕರಣಗಳು ಯಾವುವು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ಎಚ್-1ಬಿ ವೀಸಾ ಕುರಿತಂತೆ ಮಹತ್ವದ ಆದೇಶ ಹೊರಡಿಸಿದ್ದ ಟ್ರಂಪ್, ಸೆ.21ರ ನಂತರ ಎಚ್-1ಬಿ ವೀಸಾ ಪಡೆಯುವವರು 1 ಲಕ್ಷ ಅಮೆರಿಕನ್ ಡಾಲರ್ (ಸುಮಾರು 88.6 ಲಕ್ಷ ರು.) ಪಾವತಿಸಬೇಕು ಎಂದು ಘೋಷಿಸಿದ್ದರು. ಇದು ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))