ಸಾರಾಂಶ
ಡಾಲರ್ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ.
ವಾಷಿಂಗ್ಟನ್: ಡಾಲರ್ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ ನಮ್ಮನ್ನು ಎದುರು ಹಾಕಿಕೊಳ್ಳಬೇಡಿ. ಈ ರೀತಿ ಮಾಡುವುದಾದರೆ ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ. ಒಂದು ವೇಳೆ ಎದುರು ಹಾಕಿಕೊಂಡರೆ ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಶೇ.100ರಷ್ಟು ಸುಂಕವನ್ನು ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಿರುವ ಟ್ರಂಪ್, ‘ ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ. ನಾವು ನಿಂತು ನೋಡುತ್ತಿರುವುದು ಮುಗಿದಿದೆ. ಅಮೆರಿಕದ ಡಾಲರ್ ಬದಲಿಗೆ ಹೊಸ ಬ್ರಿಕ್ಸ್ ಕರೆನ್ಸಿಯನ್ನು ತರುವುದಿಲ್ಲ ಎನ್ನುವ ಬದ್ಧತೆ ತೋರಲಿ ಅಥವಾ ಶೇ.100ರಷ್ಟು ಸುಂಕವನ್ನು ಎದುರಿಸಲಿ. ಅವರು ಮತ್ತೊಂದು ಮುಟ್ಠಾಳ ರಾಷ್ಟ್ರವನ್ನು ಹುಡುಕಲಿ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಅಮೆರಿಕ ಡಾಲರ್ ಬದಲಿಸುವ ಯಾವುದೇ ಅವಕಾಶವಿಲ್ಲ. ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಬೇಕು ಎಂದರೆ ಅಮೆರಿಕಕ್ಕೆ ವಿದಾಯ ಹೇಳಬೇಕು ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.ಭಾರತದ ಸೇರಿದಂತೆ 10 ರಾಷ್ಟ್ರಗಳ ಸಂಘಟನೆಯಾಗಿರುವ ಬ್ರಿಕ್ಸ್ ಅಮೆರಿಕದ ಡಾಲರ್ ಬದಲಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತ್ಯೇಕ ಕರೆನ್ಸಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))