ಆಫ್ರಿಕಕ್ಕೆ ವಾಪಸ್‌ ಕಳಿಸುವೆ: ಮಸ್ಕ್‌ಗೆ ಟ್ರಂಪ್‌ ಎಚ್ಚರಿಕೆ

| Published : Jul 02 2025, 12:23 AM IST / Updated: Jul 02 2025, 12:24 AM IST

ಆಫ್ರಿಕಕ್ಕೆ ವಾಪಸ್‌ ಕಳಿಸುವೆ: ಮಸ್ಕ್‌ಗೆ ಟ್ರಂಪ್‌ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಮಹತ್ವಾಕಾಂಕ್ಷಿ ತೆರಿಗೆ ಮಸೂದೆಯನ್ನು ವಿರೋಧಿಸುತ್ತಿರುವ ವಿಶ್ವದ ನಂ.1 ಶ್ರೀಮಂತ ಹಾಗೂ ತಮ್ಮ ಮಾಜಿ ಆಪ್ತ ಎಲಾನ್‌ ಮಸ್ಕ್‌ ಅವರಿಗೆ ಬೆದರಿಕೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿರೋಧ ಮುಂದುವರಿಸಿದರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇವೆ. ಹೀಗಾದರೆ ನಿಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮಾತೃದೇಶ ದ.ಆಫ್ರಿಕಾಗೆ ಮರಳಬೇಕಾದೀತು’ ಎಂದು ಎಚ್ಚರಿಸಿದ್ದಾರೆ.

ಟೆಸ್ಲಾಗೆ ತೆರಿಗೆ ವಿನಾಯ್ತಿ ಸ್ಥಗಿತ: ಅಧ್ಯಕ್ಷ ಬೆದರಿಕೆ

ತಮ್ಮ ತೆರಿಗೆ ಮಸೂದೆ ವಿರೋಧಿಸಿದ್ದ ಮಸ್ಕ್‌ಗೆ ಚಾಟಿವಾಷಿಂಗ್ಟನ್: ತಮ್ಮ ಮಹತ್ವಾಕಾಂಕ್ಷಿ ತೆರಿಗೆ ಮಸೂದೆಯನ್ನು ವಿರೋಧಿಸುತ್ತಿರುವ ವಿಶ್ವದ ನಂ.1 ಶ್ರೀಮಂತ ಹಾಗೂ ತಮ್ಮ ಮಾಜಿ ಆಪ್ತ ಎಲಾನ್‌ ಮಸ್ಕ್‌ ಅವರಿಗೆ ಬೆದರಿಕೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿರೋಧ ಮುಂದುವರಿಸಿದರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇವೆ. ಹೀಗಾದರೆ ನಿಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮಾತೃದೇಶ ದ.ಆಫ್ರಿಕಾಗೆ ಮರಳಬೇಕಾದೀತು’ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಅವರು ಅಮರಿಕದಲ್ಲಿ ಈಗ ‘ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌’ ಹೆಸರಿನ ತೆರಿಗೆ ಮಸೂದೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಇದು ಸರ್ಕಾರ ನೀಡುವ ಸಬ್ಸಿಡಿಗಳನ್ನು 4.5 4.5 ಟ್ರಿಲಿಯನ್‌ ಡಾಲರ್‌ನಷ್ಟು ಕಡಿತಗೊಳಿಸುವ ಮತ್ತು ಮಿಲಿಟರಿ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಉದ್ದೇಶ ಹೊಂದಿದೆ.

ಆದರೆ ಸಬ್ಸಿಡಿ ಕಡಿತ ಮಾಡಿದರೆ ಅಮೆರಿಕ ಆರ್ಥಿಕತೆಗೆ ಹೊಡೆತ ಬೀಳಲಿದೆ. ಇದು ಕಂಪನಿಗಳಿಗೆ ಹೊಡೆತ ನೀಡಿ ಭಾರಿ ಉದ್ಯೋಗ ಹಾನಿಗೆ ಕಾರಣವಾಗಬಹುದು. ಇದನ್ನು ಜಾರಿಗೆ ತರಬಾರದು ಎಂಬುದು ಮಸ್ಕ್‌ ವಾದ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಅಮೆರಿಕದ ಆಡಳಿತ ಸುಧಾರಣಾ ವಿಭಾಗಕ್ಕೆ ರಾಜೀನಾಮೆ ನೀಡಿದ್ದರು.

ಮಸ್ಕ್‌ ಮೂಲತಃ ದ.ಆಫ್ರಿಕದವರು. ಅಲ್ಲಿಂದ ವಲಸೆ ಬಂದು ಅಮೆರಿಕದಲ್ಲಿ ಉದ್ಯಮ ಕಟ್ಟಿದ್ದರು.

==

ಹೊಸ ಪಕ್ಷ ಕಟ್ಟುವೆ: ಟ್ರಂಪ್‌ಗೆ ಮಸ್ಕ್‌ ತಿರುಗೇಟು

ವಾಷಿಂಗ್ಟನ್‌: ‘ಅಮೆರಿಕ ಸೆನೆಟ್‌ನಲ್ಲಿ ಟ್ರಂಪ್‌ರ ಖರ್ಚು ಮಸೂದೆಯನ್ನು ಅಂಗೀಕರಿಸಿದರೆ, ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್ ಪಕ್ಷಗಳಿಗೆ ಪರ್ಯಾಯವಾಗಿ ಅಮೆರಿಕನ್ ಪಾರ್ಟಿ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸುವೆ’ ಎಂದು ಅಧ್ಯಕ್ಷ ಟ್ರಂಪ್‌ಗೆ ಟೆಸ್ಲಾ ಕಂಪನಿ ಮಾಲೀಕ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್ ಎಚ್ಚರಿಸಿದ್ದಾರೆ.ಟೆಸ್ಲಾ ಕಂಪನಿಯ ತೆರಿಗೆ ಕಡಿತದ ಎಚ್ಚರಿಕೆ ನೀಡಿರುವ ಟ್ರಂಪ್‌ಗೆ ಸವಾಲು ಎಸೆದಿರುವ ಮಸ್ಕ್‌, ‘ನೋಡೇಬಿಡೋಣ. ನಮ್ಮ ಕಂಪನಿ ಮೇಲಿನ ತೆರಿಗೆ ವಿನಾಯ್ತಿ ನಿಲ್ಲಿಸಿ. ಅಲ್ಲದೆ, ಈ ಹುಚ್ಚುತನದ ತೆರಿಗೆ ಮಸೂದೆ ಅಂಗೀಕಾರವಾದರೆ, ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮಾಕ್ರಾಟ್-ರಿಪಬ್ಲಿಕನ್ ಯುನಿಪಾರ್ಟಿಗೆ ಪರ್ಯಾಯ ಪಕ್ಷದ ಅಗತ್ಯವಿದೆ. ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಅವರು ಕಂಪನಿಗಳಿಗೆ ನೀಡುವ ಸಬ್ಸಿಡಿ ಕಡಿತ ಮಾಡಿದರೆ ಅಮೆರಿಕ ಆರ್ಥಿಕತೆಗೆ ಹೊಡೆತ ಬೀಳಲಿದೆ. ಇದು ಕಂಪನಿಗಳಿಗೆ ಹೊಡೆತ ನೀಡಿ ಭಾರಿ ಉದ್ಯೋಗ ಹಾನಿಗೆ ಕಾರಣವಾಗಬಹುದು. ಇದನ್ನು ಜಾರಿಗೆ ತರಬಾರದು ಎಂಬುದು ಮಸ್ಕ್‌ ವಾದ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಅಮೆರಿಕದ ಆಡಳಿತ ಸುಧಾರಣಾ ವಿಭಾಗಕ್ಕೆ ರಾಜೀನಾಮೆ ನೀಡಿದ್ದರು.

==

ಭಾರತದ ಮೇಲೆ ಟ್ರಂಪ್ ಶೇ.500 ತೆರಿಗೆ?

ವಾಷಿಂಗ್ಟನ್: ಭಾರತ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ‘ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕಕ್ಕೆ ಬರುವ ನಿಮ್ಮ ಉತ್ಪನ್ನಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಲಾಗುತ್ತದೆ’ ಎಂದು ಲಿಂಡ್ಡ್ ಹೇಳಿದ್ದಾರೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ.70ರಷ್ಟು ತೈಲ ಖರೀದಿಸುತ್ತವೆ.