ಸಾರಾಂಶ
ತಿರುಪತಿ: ವಿಶ್ವದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) 2024-25ನೇ ಸಾಲಿಗೆ 5142 ಕೋಟಿ ರು. ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದೆ.
ಕಳೆದ ವರ್ಷ ಈ ಪ್ರಮಾಣ 5123 ಕೋಟಿ ರು.ನಷ್ಟಿತ್ತು. ಹೀಗಾಗಿ ಬಜೆಟ್ ಪ್ರಮಾಣ ಈ ಸಲ ಅಲ್ಪ ಹೆಚ್ಚಿದಂತಾಗಿದೆ.
ಹುಂಡಿ ಕಾಣಿಕೆಯಿಂದ 1611 ಕೋಟಿ ರು., ಠೇವಣಿ ಮೇಲಿನ ಬಡ್ಡಿಯಿಂದ 1167 ಕೋಟಿ ರು., ಪ್ರಸಾದದಿಂದ 600 ಕೋಟಿ ರು., 347 ಕೋಟಿ ಹಾಲಿ ಬ್ಯಾಂಕ್‌ನಲ್ಲಿರುವ ನಗದು, ದರ್ಶನ ಟಿಕೆಟ್ ಮೂಲಕ 338 ಕೋಟಿ ರು.
ಸಿಬ್ಬಂದಿ ನೀಡಿದ ಸಾಲದ ಬಡ್ಡಿ, ಇತರೆ ಭದ್ರತಾ ಠೇವಣಿಗಳ ಮೂಲಕ 246 ಕೋಟಿ ರು., ಅರ್ಜಿತ ಸೇವೆ ಮೂಲಕ 129 ಕೋಟಿ ರು., ಇತರೆ ಮೂಲಗಳ ಮೂಲಕ 129 ಕೋಟಿ ರು.
ಕಲ್ಯಾಣಮಂಟಪದ ಮೂಲಕ 147 ಕೋಟಿ ರು.,ಕಲ್ಯಾಣಕಟ್ಟದ ಮೂಲಕದ 151 ಕೋಟಿ ರು. ಆದಾಯವನ್ನು ಟಿಟಿಡಿ ನಿರೀಕ್ಷಿಸಿದೆ.
ವೆಚ್ಚ ಹೇಗೆ?
1733 ಕೋಟಿ ರು. ಸಿಬ್ಬಂದಿಗಳ ವೇತನಕ್ಕೆ, 751 ಕೋಟಿ ರು. ವಿವಿಧ ವಸ್ತುಗಳ ಖರೀದಿಗೆ, 750 ಕೋಟಿ ರು. ಇತರೆ ಹೂಡಿಕೆಗಳಿಗೆ, 350 ಕೋಟಿ ರು. ಎಂಜಿನಿಯರಿಂಗ್ ಕೆಲಸಕ್ಕೆ, ಎಂಜಿನಿಯರಿಂಗ್ ನಿರ್ವಹಣಾ ಕೆಲಸಕ್ಕೆ 190 ಕೋಟಿ ರು.
ಹಿಂದೂ ಧರ್ಮ ಪರಿಷದ್‌ಗೆ 114 ಕೋಟಿ ರು., ಇತರೆ ಇದೇ ರೀತಿಯ ಯೋಜನೆಗಳಿಗೆ 109 ಕೋಟಿ ರು., ಸಿಬ್ಬಂದಿಗೆ ಸಾಲ ನೀಡಲು 167 ಕೋಟಿ ರು.
ಪಿಂಚಣಿ, ಆರೋಗ್ಯ ವಿಮೆಗೆ 100 ಕೋಟಿ ರು., ಆಂಧ್ರಪ್ರದೇಶ ಸರ್ಕಾರಕ್ಕೆ ನೀಡಲು 50 ಕೋಟಿ ರು. ನೀಡಲು ಉದ್ದೇಶಿಸಲಾಗಿದೆ.