ಸಾರಾಂಶ
ತಿರುಮಲ: ನಟಿ ಹಾಗೂ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿದ್ದ ರೋಜಾ ಅವರು ಪ್ರತಿ ವಾರ ತಿರುಮಲಕ್ಕೆ ಸುಮಾರು 100 ಜನರೊಂದಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದ ವಿಷಯ ಈಗ ಮುನ್ನೆಲೆಗೆ ಬಂದಿದೆ. ರೋಜಾ ದರ್ಶನ ಟಿಕೆಟ್ ವಿಷಯದಲ್ಲಿ ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕು ಎಂದು ಅವರ ವಿರೋಧಿಗಳು ಆಗ್ರಹಿಸಿದ್ದಾರೆ.
ರೋಜಾ ಇತ್ತೀಚಿನ ಆಂಧ್ರ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಸೋಲಿಗೂ ಮುನ್ನ ಹಲವು ತಿಂಗಳು ಕಾಲ ಪ್ರತಿ ವಾರ ಸುಮಾರು 100 ಕಾರ್ಯಕರ್ತರೊಂದಿಗೆ ಅವರು ತಿರುಮಲಕ್ಕೆ ಭೇಟಿ ನೀಡುತ್ತಿದ್ದರು. ಗಣ್ಯರಿಗೆ ಇರುವ ‘ಶಿಷ್ಟಾಚಾರ ದರ್ಶನ’ ಮಾಡುತ್ತಿದ್ದರು. ತಾವು ಕರೆತರುತ್ತಿದ್ದ ಬೆಂಬಲಿಗರಿಗೆ ವಿಶೇಷ ಟಿಕೆಟ್ ಕೊಡಿಸುತ್ತಿದ್ದರು. ಆದರೆ ಟಿಕೆಟ್‌ಗಾಗಿ ಅವರು ಮೊದಲೇ ಪ್ರತಿ ವಾರ ಸಾವಿರಾರು ರುಪಾಯಿ ಸಂಗ್ರಹಿಸುತ್ತಿದ್ದರು. ಈ ರೀತಿ ಸಾಕಷ್ಟು ದುಡ್ಡನ್ನು ಅವರು ಟಿಕೆಟ್ ನೆಪದಲ್ಲಿ ಸಂಗ್ರಹಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ನೂತನ ಟಿಡಿಪಿ ಸರ್ಕಾರಕ್ಕೆ ಅವರ ವಿರೋಧಿಗಳು ಆಗ್ರಹಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))