ಷೇರುಪೇಟೆ ನಿಯಂತ್ರಕ ಸಂಸ್ಥೆಯಾದ ಭಾರತೀಯ ವಿನಿಮಯ ಮತ್ತು ಭದ್ರತಾ ಮಂಡಳಿಯ (ಸೆಬಿ) 11ನೇ ಅಧ್ಯಕ್ಷರಾಗಿ ತುಹಿನ್ ಕಾಂತ ಪಾಂಡೆ ಶನಿವಾರ ಅಧಿಕಾರ ಸ್ವೀಕರಿಸಿದರು.

ಮುಂಬೈ: ಷೇರುಪೇಟೆ ನಿಯಂತ್ರಕ ಸಂಸ್ಥೆಯಾದ ಭಾರತೀಯ ವಿನಿಮಯ ಮತ್ತು ಭದ್ರತಾ ಮಂಡಳಿಯ (ಸೆಬಿ) 11ನೇ ಅಧ್ಯಕ್ಷರಾಗಿ ತುಹಿನ್ ಕಾಂತ ಪಾಂಡೆ ಶನಿವಾರ ಅಧಿಕಾರ ಸ್ವೀಕರಿಸಿದರು.

ಪಾಂಡೆ ಶನಿವಾರದವರೆಗೆ ಕೇಂದ್ರ ಸರ್ಕಾದ ಆರ್ಥಿಕ ಕಾರ್ಯದರ್ಶಿಯಾಗಿದ್ದರು. ಅವರನ್ನು ಸೆಬಿ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿತ್ತು. ಅವರ ಅಧಿಕಾರ ಅವಧಿ 3 ವರ್ಷ.

ಸೆಬಿ ಅಧ್ಯಕ್ಷರಾಗಿ ಈ ಹಿಂದೆ ಇದ್ದ ಮಾಧವಿ ಪುರಿ ಬುಚ್ ಅವರ ಮೂರು ವರ್ಷದ ಅಧಿಕಾರಧಿ ಶುಕ್ರವಾರ ಮುಕ್ತಾಯವಾಯಿತು. ಬುಚ್‌ ಅನಾರೋಗ್ಯದ ಕಾರಣ ನೀಡಿ ಮಾಧವಿ ಅವರು ಪಾಂಡೆ ಅಧಿಕಾರ ಸ್ವೀಕಾರ ವೇಳೆ ಹಾಜರಿರಲಿಲ್ಲ.