ಸಾರಾಂಶ
ಇಲ್ಲಿನ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಅ ಕಲ್ಪಿಸುವುದಕ್ಕಾಗಿ ಲ್ಯಾಂಡ್‌ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಉತ್ತರಕಾಶಿ: ನುಕೂಲಇಲ್ಲಿನ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಅ ಕಲ್ಪಿಸುವುದಕ್ಕಾಗಿ ಲ್ಯಾಂಡ್‌ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬಿಎಸ್‌ಎನ್‌ಎಲ್ ಈ ಸೌಲಭ್ಯವನ್ನು ಕಲ್ಪಿಸಿದ್ದು, ಕಾರ್ಮಿಕರಿಗೆ ಪೈಪ್ ಮೂಲಕ ಫೋನ್ ತಲುಪಿಸಲಾಗಿದೆ. ಆಹಾರ ಮತ್ತು ಅಗತ್ಯವಸ್ತುಗಳನ್ನು ಸಾಗಿಸಲು ನಿರ್ಮಾಣ ಮಾಡಲಾಗಿರುವ ಪೈಪ್ ಮೂಲಕವೇ ಫೋನ್ ಸಂಪರ್ಕ ಒದಗಿಸಲಾಗಿದೆ. ಈ ಮೂಲಕ ಅವರು ತಮ್ಮ ಕುಟುಂಬದ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.