ಸಾರಾಂಶ
ಸದ್ಯ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆಸ್ಟ್ರೇಲಿಯಾ ತಂಡದ ಇಬ್ಬರು ಕ್ರಿಕೆಟ್ ಆಟಗಾರ್ತಿಯರಿಗೆ ಇಂದೋರ್‌ನಲ್ಲಿ ಬೈಕ್ ಸವಾರನೊಬ್ಬ ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಇಂದೋರ್ : ಸದ್ಯ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆಸ್ಟ್ರೇಲಿಯಾ ತಂಡದ ಇಬ್ಬರು ಕ್ರಿಕೆಟ್ ಆಟಗಾರ್ತಿಯರಿಗೆ ಇಂದೋರ್‌ನಲ್ಲಿ ಬೈಕ್ ಸವಾರನೊಬ್ಬ ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಕಾಮುಕ ಅಕಿಲ್ ಖಾನ್‌ನನ್ನು ಬಂಧಿಸಲಾಗಿದೆ
ಈ ಸಂಬಂಧ ಕಾಮುಕ ಅಕಿಲ್ ಖಾನ್‌ನನ್ನು ಬಂಧಿಸಲಾಗಿದೆ.ಆಟಗಾರ್ತಿಯರು ತಾವು ತಂಗಿದ್ದ ಹೋಟೆಲ್ ರೂಂನಿಂದ ಹೊರಬಂದು ಕೆಫೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಆತ ಇಬ್ಬರನ್ನೂ ಹಿಂಬಾಲಿಸಿದ್ದ. ಮಾತ್ರವಲ್ಲದೆ, ಆ ಪೈಕಿ ಒಬ್ಬ ಆಟಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿ ಪರಾರಿಯಾಗಿದ್ದ.
ಭದ್ರತಾ ಸಂಪರ್ಕ ಅಧಿಕಾರಿಗೆ ವಿಚಾರ
ಘಟನೆಯ ಬಳಿಕ ಇಬ್ಬರೂ ತಮ್ಮ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಮೂಲಕ ಸ್ಥಳೀಯ ಭದ್ರತಾ ಸಂಪರ್ಕ ಅಧಿಕಾರಿಗೆ ವಿಚಾರ ಮುಟ್ಟಿಸಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆಟಗಾರ್ತಿಯರ ಬಳಿ ಮಾಹಿತಿ ಪಡೆದು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇನ್ನು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಶಂಕಿತ ಆರೋಪಿಯ ಬೈಕ್ ಸಂಖ್ಯೆಯನ್ನು ಗಮನಿಸಿದ್ದು , ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
;Resize=(690,390))

;Resize=(128,128))