ಸಾರಾಂಶ
ಪೊಲೀಸರ ಮೇಲೆ ಅತ್ಯಾ*ರ ಹಾಗೂ ಮಾನಸಿಕ ಕಿರುಕುಳ ಆರೋಪ ಹೊರಿಸಿ ಕೈನಲ್ಲಿ ಮರಣಪತ್ರ ಬರೆದುಕೊಂಡು ಆತ್ಮ*ತ್ಯೆ ಮಾಡಿಕೊಂಡ ಮಹಾರಾಷ್ಟ್ರದ ಸತಾರಾ ವೈದ್ಯೆಯ ಮತ್ತೊಂದು 4 ಪುಟಗಳ ಡೆತ್‌ನೋಟ್ ಆಕೆ ತಂಗಿದ್ದ ಹೋಟೆಲ್‌ನಲ್ಲಿ ಸಿಕ್ಕಿದೆ. ಅದರಲ್ಲಿ ಸಂಸದನಿಂದಲೂ ತನಗೆ ಬೆದರಿಕೆ ಬಂದಿತ್ತು ಎಂದು ಆಕೆ ಬರೆದಿದ್ದಾರೆ.
ಪುಣೆ: ಪೊಲೀಸರ ಮೇಲೆ ಅತ್ಯಾ*ರ ಹಾಗೂ ಮಾನಸಿಕ ಕಿರುಕುಳ ಆರೋಪ ಹೊರಿಸಿ ಕೈನಲ್ಲಿ ಮರಣಪತ್ರ ಬರೆದುಕೊಂಡು ಆತ್ಮ*ತ್ಯೆ ಮಾಡಿಕೊಂಡ ಮಹಾರಾಷ್ಟ್ರದ ಸತಾರಾ ವೈದ್ಯೆಯ ಮತ್ತೊಂದು 4 ಪುಟಗಳ ಡೆತ್‌ನೋಟ್ ಆಕೆ ತಂಗಿದ್ದ ಹೋಟೆಲ್‌ನಲ್ಲಿ ಸಿಕ್ಕಿದೆ. ಅದರಲ್ಲಿ ಸಂಸದನಿಂದಲೂ ತನಗೆ ಬೆದರಿಕೆ ಬಂದಿತ್ತು ಎಂದು ಆಕೆ ಬರೆದಿದ್ದಾರೆ.
‘ಪೊಲೀಸರು ಆಸ್ಪತ್ರೆಗೆ ಕರೆತರುವ ಆರೋಪಿಗಳ ಪರವಾಗಿ ವೈದ್ಯಕೀಯ ಪರೀಕ್ಷೆ ವರದಿ ಕೊಡಬೇಕು. ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರುಚಿ ಬರೆಯಬೇಕು ಎಂದು ಎಂದು ಸಂಸದರೊಬ್ಬರು ಬೆದರಿಕೆ ಹಾಕಿದ್ದರು. ಪೊಲೀಸರಿಂದಲೂ ಇದೇ ಕಾರಣಕ್ಕೆ ಬೆದರಿಕೆ ಬರುತ್ತಿತ್ತು. ಸಂಸದರ ಇಬ್ಬರು ಪಿಎಗಳು ಆಸ್ಪತ್ರೆಗೆ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದರು. ಬೇಡಿಕೆಗೆ ಸ್ಪಂದಿಸದೇ ಹೋದಾಗ ಎಸ್‌ಐ ಗೋಪಾಲ್ ಬಡನೆ ಅತ್ಯಾ*ರ ಮಾಡಿದ್ದ’ ಎಂದು ವೈದ್ಯೆ ಮರಣಪತ್ರದಲ್ಲಿ ಬರೆದುಕೊಂಡಿದ್ದಾರೆ.
ವೈದ್ಯೆ ಮೆಲೂ ದೂರು:
ಆದರೆ ವೈದ್ಯೆಯೇ ಹಲವು ಬಾರಿ ವೈದ್ಯಕೀಯ ವರದಿಗಳನ್ನು ಸಕಾಲಕ್ಕೆ ಕೊಡದೇ ತನಿಖೆಗೆ ಅಡ್ಡಿ ಮಾಡಿದ್ದಳು ಎಂದು ಪೊಲೀಸರು ಜಿಲ್ಲಾ ಸರ್ಜನ್‌ಗೆ 2 ತಿಂಗಳ ಹಿಂದೆ ದೂರಿದ್ದರು ಎಂದೂ ಈಗ ಗೊತ್ತಾಗಿದೆ.
ಓರ್ವ ಆರೋಪಿ ಸೆರೆ:
ಇದೇ ಪ್ರಕರಣದಲ್ಲಿ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಶಾಂತ್ ಬಾಣಕರ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಬಂಧಿತ. ವೈದ್ಯೆ ಇದ್ದ ಮನೆ ಮಾಲೀಕನ ಮಗನಾಗಿದ್ದು, ಈತ ವೈದ್ಯೆಗೆ ಮಾನಸಿಕ ಹಿಂಸೆ ನೀಡಿದ್ದ ಎಂದು ಆಕೆ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಿಕ್ಕವರಿಗೆ ಬಲೆ ಬೀಸಲಾಗಿದೆ.
ಡೆತ್‌ನೋಟಲ್ಲೇನಿದೆ?।
- ಆಸ್ಪತ್ರೆಗೆ ಬರುವ ಆರೋಪಿಗಳ ಪರವಾಗಿ ವರದಿ ಬರೆಯಲು ಒತ್ತಡ
- ಮರಣೋತ್ತರ ಪರೀಕ್ಷೆಯ ವರದಿಯನ್ನೇ ತಿರುಚುವಂತೆ ಬೆದರಿಕೆ
- ಪೊಲೀಸರಿಂದಲೂ ಬೆದರಿಕೆ, ಒಪ್ಪದಿದ್ದಾಗ ಗೋಪಾಲ್‌ನಿಂದ ರೇ*
;Resize=(128,128))