ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಅಮೆರಿಕದ ಕನೆಕ್ಟಿಕಟ್‌ನಲ್ಲಿ ನಿಗೂಢ ರೀತಿಯಲಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಹೈದರಾಬಾದ್‌: ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿದ್ದ ತೆಲಂಗಾಣ, ಆಂಧ್ರಪ್ರದೇಶದ ಇಬ್ಬರು ವಿದ್ಯಾರ್ಥಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ತೆಲಂಗಾಣದ ದಿನೇಶ್‌ (22) ಮತ್ತು ಆಂಧ್ರದ ನಿಕೇಶ್‌ (21) ಅಮೆರಿಕದ ಕನೆಕ್ಟಿಕಟ್‌ನಲ್ಲಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು.

ಇವರಿಗೆ ಸಮೀಪದಲ್ಲೇ ನೆಲೆಸಿರುವ ಇವರ ಸ್ನೇಹಿತರು ಭಾರತದಲ್ಲಿನ ಕುಟುಂಬಸ್ಥರಿಗೆ ಶನಿವಾರ ರಾತ್ರಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ದಿನೇಶ್‌ ಕಳೆದ ಡಿ.28ರಂದು ಕನೆಕ್ಟಿಕಟ್‌ಗೆ ತೆರಳಿದ್ದರೆ, ಅದಾದ ಕೆಲ ದಿನಗಳ ಬಳಿಕ ನಿಕೇಶ್‌ ತೆರಳಿದ್ದರು.ಮೃತ ವಿದ್ಯಾರ್ಥಿಗಳ ಕುಟುಂಬದ ಪರಸ್ಪರ ಪರಿಚಿತರು ಕೂಡಾ ಅಲ್ಲ ಎಂದು ತಿಳಿದುಬಂದಿದೆ.