ಸುಪ್ರೀಂ ಕೋರ್ಟ್‌ಗೆ 2 ಜಡ್ಜ್‌ ನೇಮಕ: ಎಲ್ಲಾ 34 ಸ್ಥಾನಗಳು ಭರ್ತಿ

| Published : Jul 17 2024, 12:47 AM IST

ಸುಪ್ರೀಂ ಕೋರ್ಟ್‌ಗೆ 2 ಜಡ್ಜ್‌ ನೇಮಕ: ಎಲ್ಲಾ 34 ಸ್ಥಾನಗಳು ಭರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನ್ಯಾ। ಎನ್‌.ಕೋಟೀಶ್ವರ್ ಸಿಂಗ್ ಮತ್ತು ಆರ್‌.ಮಹಾದೇವನ್‌ ಅವರನ್ನು ಮಂಗಳವಾರ ನೇಮಿಸಲಾಗಿದೆ. ನೇಮಕ ಕುರಿತ ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿದೆ.

ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನ್ಯಾ। ಎನ್‌.ಕೋಟೀಶ್ವರ್ ಸಿಂಗ್ ಮತ್ತು ಆರ್‌.ಮಹಾದೇವನ್‌ ಅವರನ್ನು ಮಂಗಳವಾರ ನೇಮಿಸಲಾಗಿದೆ. ನೇಮಕ ಕುರಿತ ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿದೆ.ಇವರಿಬ್ಬರ ನೇಮಕದಿಂದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಎಲ್ಲಾ 34 ಸ್ಥಾನಗಳು ಭರ್ತಿಯಾದಂತಾಗಿವೆ.

ಪ್ರಸ್ತುತ ಜಮ್ಮು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯಾಗಿರುವ ಎನ್‌.ಕೋಟೀಶ್ವರ್‌ ಸಿಂಗ್ ಸುಪ್ರೀಂ ಕೋರ್ಟಿನಲ್ಲಿ ಮೊದಲ ಮಣಿಪುರ ನ್ಯಾಯಾಧೀಶರೆನಿಸಿಕೊಳ್ಳುತ್ತಾರೆ. ನ್ಯಾ। ಮಹಾದೇವನ್ ಪ್ರಸ್ತುತ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂಬಾನಿ ಮದುವೆಗೆ ಬಾಂಬ್‌ ಬೆದರಿಕೆ: ಟೆಕ್ಕಿ ಬಂಧನಮುಂಬೈ: ಕಳೆದ ವಾರ ಮುಂಬೈನಲ್ಲಿ ನಡೆದ ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಕಾರ್ಯಕ್ರಮದಲ್ಲಿ ಬಾಂಬ್ ಬೆದರಿಕೆ ಇದೆ ಎಂದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಗುಜರಾತ್‌ನ ಐಟಿ ಎಂಜಿನಿಯರ್ ಒಬ್ಬನನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿರಾಲ್ ಶಾ (25) ಎಂದು ಗುರುತಿಸಲಾಗಿದ್ದು, ವಡೋದರಾದಲ್ಲಿ ಆತನನ್ನು ಬಂಧಿಸಿದ್ದಾರೆ.ಈತ ತನ್ನ ಟ್ವೀಟರ್‌ ಖಾತೆಯಲ್ಲಿ ಮದುವೆಗೂ ಮುನ್ನಾ ದಿನ ‘ನಾಳೆ ಅಂಬಾನಿ ಮದುವೆಯಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಅರ್ಧ ಜಗತ್ತು ತಲೆಕೆಳಗಾಗಿ ಹೋಗುತ್ತದೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಟ್ರಿಲಿಯನ್ ಡಾಲರ್‌ಗಳು ಒಂದು ಪಿನ್‌ಕೋಡ್‌ ಮಣ್ಣುಪಾಲಾಗಲಿವೆ’ ಎಂದು ಸಂಭಾವ್ಯ ಬಾಂಬ್‌ ಬೆದರಿಕೆ ಸಂದೇಶವನ್ನು ಪೋಸ್ಟ್‌ ಮಾಡಿದ್ದನು.ಇದರಿಂದ ಎಚ್ಚೆತ್ತ ಪೊಲೀಸರು ಮದುವೆಯಲ್ಲಿ ಭದ್ರತೆಯನ್ನು ಹೆಚ್ಚಿಸಿ, ಪೋಸ್ಟ್‌ ಬರೆದ ವ್ಯಕ್ತಿಗಾಗಿ ಶೋಧ ಆರಂಭಿಸಿದ್ದರು. ಈಗ ಆತನನ್ನು ಬಂಧಿಸಿದ್ದಾರೆ.