ಸಾರಾಂಶ
ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಮಾತೊಶ್ರೀಯನ್ನು ಸ್ಫೋಟಿಸುವುದಾಗಿ ಅನಾಮಿಕ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.
ಮುಂಬೈ: ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಇಲ್ಲಿಯ ನಿವಾಸ ಮಾತೋಶ್ರೀ ಬಳಿ ವಿಧ್ವಂಸಕ ಕೃತ್ಯ ಎಸಗುವ ಬೆದರಿಕೆ ಕರೆಯೊಂದು ಬಂದ ಹಿನ್ನೆಲೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರ ಇಲ್ಲಿಯ ಪ್ರಧಾನ ಕಚೇರಿಯ ನಿಯಂತ್ರಣಾ ಕೊಠಡಿಯು ಮಾತೋಶ್ರೀ ಬಳಿ ವಿಧ್ವಂಸಕ ಕೃತ್ಯ ಎಸಗುವ ಕರೆಯೊಂದನ್ನು ಭಾನುವಾರ ಸಂಜೆ ಸ್ವೀಕರಿಸಿತ್ತು.ಮುಂಬೈ-ಗುಜರಾತ್ ರೈಲೊಂದರಲ್ಲಿ ತಾನು ಪ್ರಯಾಣಿಸುವ ವೇಳೆ ಗುಂಪೊಂದು ಉದ್ಧವ್ ನಿವಾಸದ ಬಳಿ ದಾಳಿ ನಡೆಸಲು ಉರ್ದುವಿನಲ್ಲಿ ಚರ್ಚಿಸುತ್ತಿತ್ತು ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿದ್ದ.
ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.