ಯುಜಿಸಿ ಮೀಸಲು ಕರಡು ಮಾರ್ಗಸೂಚಿಯಿಂದ ವಿವಾದ

| Published : Jan 29 2024, 01:30 AM IST

ಯುಜಿಸಿ ಮೀಸಲು ಕರಡು ಮಾರ್ಗಸೂಚಿಯಿಂದ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲು ಇಟ್ಟಿರುವ ಸ್ಥಾನಗಳನ್ನು ಭರ್ತಿಯಾಗದಿದ್ದರೆ ಆ ಸೀಟುಗಳನ್ನು ಸಅಮಾನ್ಯ ವರ್ಗದವರಿಗೆ ನೀಡಬಹುದು ಎಂದು ಯುಜಿಸಿ ತಿದ್ದುಪಡಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಎಸ್ಸಿ, ಎಸ್ಟಿ, ಒಬಿಸಿಗೆ ಮೀಸಲಿರಿಸಿದ ಸ್ಥಾನಗಳು ಭರ್ತಿ ಆಗದೇ ಖಾಲಿ ಉಳಿದರೆ ಆ ಸೀಟುಗಳನ್ನು ಮೀಸಲು ವ್ಯಾಪ್ತಿಯಿಂದ ಹೊರಗಿಟ್ಟು ಸಾಮಾನ್ಯ ವರ್ಗಕ್ಕೆ ನೀಡಬಹುದು ಎಂಬ ಯುಜಿಸಿ ಕರಡು ಮಾರ್ಗಸೂಚಿ ವಿವಾದಕ್ಕೆ ಕಾರಣವಾಗಿದೆ.

ಇದು ಮೀಸಲು ಕಸಿಯಲು ಮೋದಿ ಸರ್ಕಾರ ನಡೆಸಿದ ಯತ್ನ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಆದರೆ ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡಿ, 2019ರ ಕಾಯ್ದೆ ಪ್ರಕಾರ ಖಾಲಿ ಮೀಸಲು ಸೀಟನ್ನು ಮೀಸಲು ರಹಿತ ಎಂದು ಘೋಷಿಸಲಾಗದು ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಕೂಡ ಸಮರ್ಥನೆ ಮಾಡಿ ಇದರಿಂದ ಮೀಸಲಾತಿ ಹೊಂದಿರುವ ವರ್ಗಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಅವರು ಸ್ಥಾನವನ್ನು ಪಡೆದುಕೊಳ್ಳದಿದ್ದರೆ ಮಾತ್ರ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.