ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ ಅವಧಿ ಜೂ.14ರವರೆಗೆ ವಿಸ್ತರಣೆ

| Published : Mar 13 2024, 02:09 AM IST

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ ಅವಧಿ ಜೂ.14ರವರೆಗೆ ವಿಸ್ತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆಧಾರ್‌ ಕಾರ್ಡ್‌ ಉಚಿತ ಪರಿಷ್ಕರಣೆ ಅವಧಿಯನ್ನು ಮತ್ತೆ ಆರಂಭಿಸಿರುವ ಯುಐಡಿಎಐ ಜೂ.14ರವರೆಗೆ ವಿಸ್ತರಣೆ ಮಾಡಿದೆ.

ನವದೆಹಲಿ: ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆಗಾಗಿ ಇದ್ದ ಅವಧಿಯನ್ನು ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು (ಆಧಾರ್ ಪ್ರಾಧಿಕಾರ) ಜೂನ್ 14 ರವರೆಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಿದೆ. ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳಲು ಈ ಹಿಂದೆ ಡಿಸೆಂಬರ್ 14 ಕೊನೆ ದಿನ ನಿಗದಿ ಮಾಡಲಾಗಿತ್ತು. ನಂತರ ಶುಲ್ಕ ಸಹಿತ ನವೀಕರಣಕ್ಕೆ ಅವಕಾಶವಿತ್ತು. ಆದರೆ ಈಗ ಉಚಿತ ನವೀಕರಣ ಅವಧಿಯನ್ನು ಜೂ.14 ರವರೆಗೆ ವಿಸ್ತರಿಸಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕಚೇರಿಗಳಿಗೆ ನವೀಕರಣಕ್ಕೆ ಹೋದರೆ ನಿಗದಿತ ಶುಲ್ಕ ನೀಡಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.