ಇಂದು ಬ್ರಿಟನ್‌ ಸಂಸತ್ ಚುನಾವಣೆ: ಸುನಕ್‌ಗೆ ಅಗ್ನಿಪರೀಕ್ಷೆ

| Published : Jul 04 2024, 01:10 AM IST / Updated: Jul 04 2024, 04:37 AM IST

Rishi Sunak
ಇಂದು ಬ್ರಿಟನ್‌ ಸಂಸತ್ ಚುನಾವಣೆ: ಸುನಕ್‌ಗೆ ಅಗ್ನಿಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

650 ಸದಸ್ಯ ಬಲದ ಬ್ರಿಟನ್‌ ಸಂಸತ್‌ಗೆ ಜು.4ರ ಗುರುವಾರ ಚುನಾವಣೆ ನಡೆಯಲಿದೆ. ಕಳೆದ 13 ವರ್ಷಗಳಿಂದ ಆಡಳಿತದಲ್ಲಿರುವ ಕನ್ಸರ್ವೇಟಿವ್‌ ಪಕ್ಷದ ಹಾಲಿ ಪ್ರಧಾನಿ, ಬೆಂಗಳೂರಿನ ಅಳಿಯ ರಿಷಿ ಸುನಕ್ ಪಾಲಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.

ಲಂಡನ್‌: 650 ಸದಸ್ಯ ಬಲದ ಬ್ರಿಟನ್‌ ಸಂಸತ್‌ಗೆ ಜು.4ರ ಗುರುವಾರ ಚುನಾವಣೆ ನಡೆಯಲಿದೆ. ಕಳೆದ 13 ವರ್ಷಗಳಿಂದ ಆಡಳಿತದಲ್ಲಿರುವ ಕನ್ಸರ್ವೇಟಿವ್‌ ಪಕ್ಷದ ಹಾಲಿ ಪ್ರಧಾನಿ, ಬೆಂಗಳೂರಿನ ಅಳಿಯ ರಿಷಿ ಸುನಕ್ ಪಾಲಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.

ಇದುವರೆಗಿನ ಚುನಾವಣಾ ಪೂರ್ವ ಸಮೀಕ್ಷೆಗಳು ವಿಪಕ್ಷ ಲೇಬರ್‌ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸುವ ಸುಳಿವು ನೀಡಿವೆ. ಹೀಗಾಗಿ ಚುನಾವಣಾ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ. 650 ಕ್ಷೇತ್ರಗಳಿಗೆ 392 ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಹೊಂದಿದ್ದರೂ ಕನ್ಸರ್ವೇಟಿವ್‌ ಮತ್ತು ಲೇಬರ್‌ ಪಕ್ಷದ ನಡುವೆ ನೇರ ಹಣಾಹಣಿ ಇದೆ. ಜು.5ರಂದು ಫಲಿತಾಂಶ ಪ್ರಕಟವಾಗಲಿದೆ.

ದಾಖಲೆ ಭಾರತೀಯರು: 2019ರಲ್ಲಿ ನಡೆದಿದ್ದ ಕಳೆದ ಚುನಾವಣೆಯಲ್ಲಿ ಭಾರತೀಯ ಮೂಲದ 15 ಜನರು ಸಂಸತ್‌ಗೆ ಆಯ್ಕೆಯಾಗಿದ್ದರು. ಈ ಬಾರಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಈ ಬಾರಿ ಸಂಸತ್‌ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ಶೇ.14ರಷ್ಟು ಜನರು ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಯವರಾಗಿದ್ದು, ಈ ಬಾರಿ ಲೇಬರ್‌ ಪಕ್ಷ ಅಧಿಕಾರಕ್ಕೆ ಅಲ್ಲಿಂದ ಕಣಕ್ಕೆ ಇಳಿದಿರುವ ಹೆಚ್ಚಿನ ಸಂಖ್ಯೆಯ ಭಾರತೀಯರು ಸಂಸತ್‌ ಪ್ರವೇಶ ಮಾಡುವುದು ಖಚಿತವಾಗಿದೆ.

ರಿಷಿ ಸುನಕ್‌ ಅವರು ರಿಚ್ಮಂಡ್‌ ಆ್ಯಂಡ್‌ ನಾರ್ಥನ್‌ಲ್ಲೆರ್ಟನ್‌ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.