ಸಾರಾಂಶ
ಕಳೆದ ಮೂರು ವರ್ಷದಿಂದ ಸತತವಾಗಿ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಉಕ್ರೇನ್ ಸರ್ಕಾರ, ಇದೀಗ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸಲುವಾಗಿ ಜನರ ಮೇಲೆ ಯುದ್ಧ ತೆರಿಗೆ ಹೇರಲು ನಿರ್ಧರಿಸಿದೆ.
ಕೀವ್: ಕಳೆದ ಮೂರು ವರ್ಷದಿಂದ ಸತತವಾಗಿ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಉಕ್ರೇನ್ ಸರ್ಕಾರ, ಇದೀಗ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸಲುವಾಗಿ ಜನರ ಮೇಲೆ ಯುದ್ಧ ತೆರಿಗೆ ಹೇರಲು ನಿರ್ಧರಿಸಿದೆ. ಅದರನ್ವಯ ವೈಯಕ್ತಿಕ ತೆರಿಗೆ ಪ್ರಮಾಣವನ್ನು ಶೇ1.5ರಿಂದ ಶೇ.5ಕ್ಕೆ ಹೆಚ್ಚಿಸಿದೆ. ಜೊತೆಗೆ ಲಕ್ಷಾಂತರ ಉದ್ಯಮಿಗಳಿಗೂ ಹೊಸದಾಗಿ ತೆರಿಗೆ ಹಾಕಿದೆ.
ಡಿ.1ರಿಂದ ಹೊಸ ನಿಯಮ ಜಾರಿಯಾಗಲಿದೆ. ಇದರ ಜೊತೆಗೆ ವಾಣಿಜ್ಯ ಬ್ಯಾಂಕುಗಳ ಲಾಭಗಳ ಮೇಲೆ ಶೇ.50ರಷ್ಟು ತೆರಿಗೆ, ಇತರ ಹಣಕಾಸು ಸಂಸ್ಥೆಗಳ ಲಾಭದ ಮೇಲಿನ ತೆರಿಗೆಯನ್ನು ಶೇ.25ಕ್ಕೇರಿಸಲಾಗಿದೆ. ಈ ಹೆಚ್ಚಳದಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 28000 ಕೋಟಿ ರು. ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. ಉಕ್ರೇನ್‌ನ ರಕ್ಷಣಾ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲವನ್ನು ಭದ್ರ ಪಡಿಸಿಕೊಳ್ಳಲು ಈ ಕಾನೂನು ಮುಖ್ಯ ಎಂದು ಸರ್ಕಾರ ಹೇಳಿದೆ.