ಮೋದಿ, ಘೋರಿ ಇದ್ದಂತೆ, ಹೊಸ ಸಂಸತ್ತೇ ಅರಮನೆ: ಅನ್‌ಅಕಾಡಮಿ ಶಿಕ್ಷಕ ವಿವಾದ
1 Min read
KannadaprabhaNewsNetwork
Published : Oct 03 2023, 06:02 PM IST| Updated : Mar 18 2024, 08:12 AM IST
Share this Article
FB
TW
Linkdin
Whatsapp
Image Credit: Our own
ಆನ್‌ಲೈನ್ ಶಿಕ್ಷಣ ವೇದಿಕೆಯಾದ ಅನ್‌ಅಕಾಡೆಮಿಯ ಶಿಕ್ಷಕರೊಬ್ಬರು, ಪ್ರಧಾನಿ ನರೇಂದ್ರ ಮೋದಿ ಅವರನ್ನು, ಶತಮಾನಗಳ ಹಿಂದೆ ಭಾರತದ ಮೇಲೆ ದಾಳಿ ಮಾಡಿದ್ದ ಆಫ್ಘನ್ ದೊರೆ ಮೊಹಮ್ಮದ್ ಘೋರಿಗೆ ಹೋಲಿಸಿದ್ದಾರೆ
ನವದೆಹಲಿ: ಆನ್‌ಲೈನ್ ಶಿಕ್ಷಣ ವೇದಿಕೆಯಾದ ಅನ್‌ಅಕಾಡೆಮಿಯ ಶಿಕ್ಷಕರೊಬ್ಬರು, ಪ್ರಧಾನಿ ನರೇಂದ್ರ ಮೋದಿ ಅವರನ್ನು, ಶತಮಾನಗಳ ಹಿಂದೆ ಭಾರತದ ಮೇಲೆ ದಾಳಿ ಮಾಡಿದ್ದ ಆಫ್ಘನ್ ದೊರೆ ಮೊಹಮ್ಮದ್ ಘೋರಿಗೆ ಹೋಲಿಸಿದ್ದಾರೆ. ಅವಾಧ್ ಓಜ್ಹಾ ಎಂಬ ಶಿಕ್ಷಕರೊಬ್ಬರು ವಿಡಿಯೋದಲ್ಲಿ, ‘‘ಮೊಘಲ್ ಸಾಮ್ರಾಜ್ಯದಂತೆಯೇ ಪ್ರಧಾನಿ ಮೋದಿಯ ಸಾಮ್ರಾಜ್ಯವೂ ಇದೆ. ನೂತನ ಸಂಸತ್ ಭವನವೇ ಮೋದಿಯ ಅರಮನೆಯಾಗಲಿದೆ. ಮೊಹಮ್ಮದ್ ಘೋರಿಯಂತೇ ಮೋದಿಗೂ ಮಕ್ಕಳಿಲ್ಲ’ ಎಂದಿದ್ದಾರೆ. ಓಜ್ಹಾ ವಿಡಿಯೋಗೆ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೇ ಇದೇ ಸಂಸ್ಥೆಯ ಶಿಕ್ಷಕ ಕರಣ್ ಸಂಘ್ವಾನ್ ಎಂಬುವವರು, ‘ವಿದ್ಯಾವಂತ ಅಭ್ಯರ್ಥಿಗಳಿಗೆ ಮಾತ್ರವೇ ಮತ ನೀಡಿ’ ಎಂದು ಕರೆ ಕೊಟ್ಟ ವಿಡಿಯೋ ಕೂಡಾ ವೈರಲ್ ಆಗಿತ್ತು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.