ಬಿರು ಬಿಸಿಲಿನಿಂದಾಗಿ ಕೋರ್ಟ್‌ ವಿಚಾರಣೆಯೇ ಮುಂದೂಡಿಕೆ!

| Published : May 30 2024, 12:51 AM IST / Updated: May 30 2024, 05:25 AM IST

Court
ಬಿರು ಬಿಸಿಲಿನಿಂದಾಗಿ ಕೋರ್ಟ್‌ ವಿಚಾರಣೆಯೇ ಮುಂದೂಡಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ದಾಖಲೆ ಉಷ್ಣಾಂಶಕ್ಕೆ ಸಾಕ್ಷಿಯಾಗಿರುವ ದೆಹಲಿ, ಇದೇ ಕಾರಣಕ್ಕೆ ಬುಧವಾರ ನ್ಯಾಯಾಲಯದ ವಿಚಾರಣೆಯೊಂದರ ಮುಂದೂಡಿಕೆಗೂ ಕಾರಣವಾಯ್ತು.

ನವದೆಹಲಿ: ದಾಖಲೆ ಉಷ್ಣಾಂಶಕ್ಕೆ ಸಾಕ್ಷಿಯಾಗಿರುವ ದೆಹಲಿ, ಇದೇ ಕಾರಣಕ್ಕೆ ಬುಧವಾರ ನ್ಯಾಯಾಲಯದ ವಿಚಾರಣೆಯೊಂದರ ಮುಂದೂಡಿಕೆಗೂ ಕಾರಣವಾಯ್ತು.

ಉಷ್ಣಾಂಶ ಹೆಚ್ಚಳದಿಂದ ವಿಚಾರಣೆ ನಡೆಸುವುದಕ್ಕೆ ಕಷ್ಟವಾಗುತ್ತಿದೆ ಎಂದು ಗ್ರಾಹಕ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಘಟನೆ ಬುಧವಾರ ನಡೆದಿದೆ. ‘ಕೋರ್ಟ್‌ನ ಈ ಕೊಠಡಿಯಲ್ಲಿ ಎಸಿ, ಕೂಲರ್ ಇಲ್ಲ. ತಾಪಮಾನ 40 ಡಿಗ್ರಿಗಿಂತ ಅಧಿಕವಾಗಿದೆ. ನ್ಯಾಯಾಲಯದ ಕೊಠಡಿಯಲ್ಲಿ ಅಧಿಕ ಉಷ್ಣಾಂಶವಿದೆ. ಇದರಿಂದ ಹೆಚ್ಚಿನ ಬೆವರಿಗೆ ಕಾರಣವಾಗುತ್ತಿದ್ದು, ವಾದವನ್ನು ಆಲಿಸುವುದಕ್ಕೆ ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಕರಣವನ್ನು ಮುಂದೂಡುವುದು ಬಿಟ್ಟು ಬೇರೆ ದಾರಿಯಿಲ್ಲ.’ ಎಂದು ಹೇಳಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದರು.

ದಿಲ್ಲಿಯಲ್ಲಿ ಪೈಪ್‌ ನೀರು ಬಳಸಿ ಕಾರು ತೊಳೆದರೆ ₹2,000 ದಂಡ: ಅತಿಶಿ 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವುಂಟಾಗಿದ್ದು, ನೀರಿನ ಸಂರಕ್ಷಣೆಗೆ ದೆಹಲಿ ಸರ್ಕಾರ ಕೆಲವು ಕಠಿಣ ಕಾನೂನುಗಳನ್ನು ರೂಪಿಸಿದೆ. 

ಅದರಂತೆ ದೆಹಲಿಯಲ್ಲಿ ಪೈಪ್‌ ಬಳಸಿ ಕಾರನ್ನು ತೊಳೆದರೆ ಹಾಗೂ ವಾಣಿಜ್ಯ ಕಟ್ಟಡ ಮತ್ತು ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಗೃಹೋಪಯೋಗಿ ನೀರಿನ ಸಂಪರ್ಕವನ್ನು ಬಳಸಿಕೊಂಡಲ್ಲಿ 2 ಸಾವಿರ ರು. ದಂಡ ವಿಧಿಸಲಾಗುತ್ತದೆ.ದೆಹಲಿ ಜಲಸಂಪನ್ಮೂಲ ಸಚಿವೆ ಅತಿಶಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ‘ಹರ್‍ಯಾಣದಿಂದ ದೆಹಲಿ ಪಾಲಿಗೆ ಬರಬೇಕಾದ ಯಮುನಾ ನದಿಯ ನೀರನ್ನು ಪೂರೈಕೆ ಮಾಡದಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆ. ಹಾಗಾಗಿ ನೀರಿನ ಅಭಾವವನ್ನು ತಡೆಯಲು ಗುರುವಾರ ಬೆಳಗ್ಗೆಯಿಂದ ಈ ಕುರಿತು ನಗರದಾದ್ಯಂತ ಗಸ್ತು ತಿರುಗಿ ನೀರನ್ನು ಪೋಲು ಮಾಡಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು’ ಎಂದು ತಿಳಿಸಿದ್ದಾರೆ.