ಸಾರಾಂಶ
ದೇಶದ ಉತ್ತರದ ರಾಜ್ಯಗಳಲ್ಲಿ ಭಾರೀ ಉಷ್ಣಹವೆ ಮುಂದುವರೆದಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ನವದೆಹಲಿ: ದೇಶದ ಉತ್ತರದ ರಾಜ್ಯಗಳಲ್ಲಿ ಭಾರೀ ಉಷ್ಣಹವೆ ಮುಂದುವರೆದಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜಧಾನಿ ನವದೆಹಲಿಯ ನಜಾಫ್‌ಗಢದಲ್ಲಿ ಗರಿಷ್ಠ 47.8 ಡಿ.ಸೆ.ನಷ್ಟು ಭಾರೀ ಉಷ್ಣಾಂಶ ದಾಖಲಾಗಿದೆ.
ಉಳಿದಂತೆ ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲೂ ಉಷ್ಣಹವೆ ಮುಂದುವರೆದಿದೆ. ಉನಾದಲ್ಲಿ 44.4 ಡಿ.ಸೆ., ಬಿಲಾಸ್‌ಪುರದಲ್ಲಿ 42.4 ಡಿ.ಸೆ., ಕಂಗ್ರಾದಲ್ಲಿ 40 ಡಿ.ಸೆ., ಪಿತಾಂಪುರದಲ್ಲಿ 47 ಡಿ.ಸೆ., ಮತ್ತು ಮುಂಗೇಶ್‌ಪುರದಲ್ಲಿ 47.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.
ಭಾರೀ ಉಷ್ಣಹವೆಯ ಪರಿಣಾಮ ಕಟ್ಟಡ ಕಾರ್ಮಿಕರು ಸೇರಿದಂತೆ ಹೊರಗಿನ ವಾತಾವರಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಹೈರಾಣಾಗಿ ಹೋಗಿದ್ದಾರೆ.