ಕುಂಭಮೇಳದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂಪುಟ ಸಚಿವರ ಪುಣ್ಯಸ್ನಾನ

| Published : Jan 23 2025, 12:49 AM IST / Updated: Jan 23 2025, 04:35 AM IST

ಸಾರಾಂಶ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಮತ್ತು ಇತರ ಕ್ಯಾಬಿನೆಟ್ ಸಚಿವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮಂಗಳವಾರ ಪವಿತ್ರ ಸ್ನಾನ ಮಾಡಿದರು.

ಪ್ರಯಾಗರಾಜ್‌: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಮತ್ತು ಇತರ ಕ್ಯಾಬಿನೆಟ್ ಸಚಿವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮಂಗಳವಾರ ಪವಿತ್ರ ಸ್ನಾನ ಮಾಡಿದರು.

ಪ್ರಯಾಗ್‌ನಲ್ಲಿ ಕುಂಭಮೇಳ ನಿಮಿತ್ತ ಸಂಪುಟ ಸಭೆ ಇತ್ತು. ಈ ನಿಮಿತ್ತ ಇಡೀ ಸಂಪುಟ ಇಲ್ಲಿ ನೆರೆದು ಪುಣ್ಯಸ್ಥಾನಗೈದಿತು.

ಜ.27ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಫೆ.1ರಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಫೆ.5ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.