ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್‌ಚಾಲೀಸಾ, ಸುಂದರಕಾಂಡ ಪಠಣ!

| Published : Nov 28 2023, 12:30 AM IST

ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್‌ಚಾಲೀಸಾ, ಸುಂದರಕಾಂಡ ಪಠಣ!
Share this Article
  • FB
  • TW
  • Linkdin
  • Email

ಸಾರಾಂಶ

ಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್‌ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.

ಈ ಮೂಲಕ ಕೈದಿಗಳ ವ್ಯಕ್ತಿತ್ವ ವಿಕಸನ: ಸಚಿವಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್‌ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ‘ಕೈದಿಗಳ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹನುಮಂತನಿಗಿಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತೊಬ್ಬನಿಲ್ಲವಾದ್ದರಿಂದ ಆತನ ಮಂತ್ರಗಳನ್ನು ಪಠಿಸಿ ಅದರ ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಕೈದಿಗಳಿಗೆ ಪ್ರೇರೇಪಿಸಲಾಗುವುದು’ ಎಂದರು.

‘ಈ ಹಿನ್ನೆಲೆಯಲ್ಲಿ ಕಾರಾಗೃಹದ ಗ್ರಂಥಾಲಯಗಳಲ್ಲಿ ಧಾರ್ಮಿಕ ಪುಸ್ತಕಗಳ ಲಭ್ಯತೆಯನ್ನು ಹೆಚ್ಚಿಸಲಾಗುವುದು ಮತ್ತು ಆಸಕ್ತಿ ತೋರಿಸಿದವರಿಗೆ ಹನುಮಾನ್‌ ಚಾಲೀಸಾ ಮತ್ತು ಸುಂದರಕಾಂಡದ ಪುಸ್ತಕಗಳನ್ನು ವಿತರಿಸಲಾಗುವುದು’ ಎಂದೂ ಹೇಳಿದರು.

‘ಈ ಯೋಜನೆ ಮಥುರಾ ಮತ್ತು ಆಗ್ರಾ ಜೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ, ಆದರೆ ಕೈದಿಗಳಿಗೆ ಪಠಣ ಕಡ್ಡಾಯವಲ್ಲ’ ಎಂದು ಸ್ಪಷ್ಟಪಡಿಸಿದರು.