ಆಹಾರದ ಮೇಲೆ ಉಗಿಯುವುದರ ವಿರುದ್ಧ ಯೋಗಿ ಸರ್ಕಾರ ಕಾಯ್ದೆ - ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮ

| Published : Oct 16 2024, 12:47 AM IST / Updated: Oct 16 2024, 05:14 AM IST

ಸಾರಾಂಶ

ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿಯ ಫುಡ್‌ ಸ್ಟಾಲ್‌ಗಳಲ್ಲಿ ಆಹಾರ ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, 2 ಸುಗ್ರೀವಾಜ್ಞೆ ಜಾರಿಗೆ ಸಿದ್ಧತೆ ನಡೆಸಿದೆ.

ಲಖನೌ: ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿಯ ಫುಡ್‌ ಸ್ಟಾಲ್‌ಗಳಲ್ಲಿ ಆಹಾರ ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ  ಕ್ರಮ ಕೈಗೊಳ್ಳಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, 2 ಸುಗ್ರೀವಾಜ್ಞೆ ಜಾರಿಗೆ ಸಿದ್ಧತೆ ನಡೆಸಿದೆ.

ಇತ್ತೀಚೆಗೆ ರಾಜ್ಯದಲ್ಲಿ ಫುಡ್‌ ಸ್ಟಾಲ್‌ನಲ್ಲಿನ ಅಡುಗೆ ಮಾಡುವವರು ಆಹಾರ ಪದಾರ್ಥಗಳ ಮೇಲೆ ಧಾರ್ಮಿಕ ಕಾರಣ ನೀಡಿ ಉಗಿದ ಹಾಗೂ ಜ್ಯೂಸ್‌ಗಳಲ್ಲಿ ಮೂತ್ರ ಮಾಡಿದ ವಿಡಿಯೋ ವೈರಲ್‌ ಆಗಿದ್ದವು. ಹೀಗಾಗಿ ಹೋಟೆಲ್‌ನಲ್ಲಿ ಸ್ವಚ್ಛತೆಗೆ ಇತ್ತೀಚೆಗೆ ಸರ್ಕಾರ ಕೆಲವು ಕ್ರಮ ಕೈಗೊಂಡಿತ್ತು.

ಆದರೆ ನಿಯಮ ಮತ್ತಷ್ಟು ಕಠಿಣಗೊಳಿಸಲು ‘ಉಗಿತ ನಿಷೇಧ ಸುಗ್ರೀವಾಜ್ಞೆ-2024’ ಹಾಗೂ ‘ಆಹಾರ ಕಲಬೆರಕೆ ತಡೆ ಸುಗ್ರೀವಾಜ್ಞೆ-2024’ ಜಾರಿಗೆ ಯೋಗಿ ಮುಂದಾಗಿದ್ದಾರೆ. ಇವುಗಳು ಜಾರಿ ಆದರೆ ಶುಚಿತ್ವ ಕಾಪಾಡದ ಹೋಟೆಲ್‌ಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗಿತ್ತದೆ. ಜತೆಗೆ ಆಹಾರ ತಯಾರಿಕೆ ವಿಧಾನ ಹಾಗೂ ಶುಚಿತ್ವದ ಮಾಹಿತಿ ಕೇಳುವ ಹಕ್ಕು ಗ್ರಾಹಕರಿಗೆ ಲಭಿಸಲಿದೆ.