ನಿರೀಕ್ಷೆಯಂತೆ ಪಿಎಸ್ಎಲ್‌ವಿ ರಾಕೆಟ್‌ ಮೇಲ್ಭಾಗ ಮರಳಿ ಭೂಮಿಗೆ

| Published : Oct 09 2024, 01:39 AM IST

ನಿರೀಕ್ಷೆಯಂತೆ ಪಿಎಸ್ಎಲ್‌ವಿ ರಾಕೆಟ್‌ ಮೇಲ್ಭಾಗ ಮರಳಿ ಭೂಮಿಗೆ
Share this Article
  • FB
  • TW
  • Linkdin
  • Email

ಸಾರಾಂಶ

: ದಾಖಲೆಯ 104 ಉಪಗ್ರಹಗಳನ್ನು ಹೊತ್ತು 7 ವರ್ಷಗಳ ಹಿಂದೆ ನಭಕ್ಕೆ ಹಾರಿದ್ದ ಪಿಎಸ್‌ಎಲ್‌ವಿ-37 ರಾಕೆಟ್‌ನ ಮೇಲಿನ ಭಾಗ ಇದೀಗ ನಿರೀಕ್ಷೆಯಂತೆ ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಬೆಂಗಳೂರು: ದಾಖಲೆಯ 104 ಉಪಗ್ರಹಗಳನ್ನು ಹೊತ್ತು 7 ವರ್ಷಗಳ ಹಿಂದೆ ನಭಕ್ಕೆ ಹಾರಿದ್ದ ಪಿಎಸ್‌ಎಲ್‌ವಿ-37 ರಾಕೆಟ್‌ನ ಮೇಲಿನ ಭಾಗ ಇದೀಗ ನಿರೀಕ್ಷೆಯಂತೆ ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧಾ ಸಂಸ್ಥೆ (ಇಸ್ರೋ) ತಿಳಿಸಿದೆ.

2017ರ ಫೆ.5ರಂದು ಕಾರ್ಟೊಸ್ಯಾಟ್-2ಡಿ ಸೇರಿದಂತೆ 104 ಉಪಗ್ರಹಗಳನ್ನುಹೊತ್ತ ಪಿಎಸ್‌ಎಲ್‌ವಿ -37 ರಾಕೆಟ್‌ ಆಗಸಕ್ಕೆ ಉಡ್ಡಯನಗೊಂಡಿತ್ತು. ಉಡ್ಡಯನದ ಬಳಿಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿದ್ದ ರಾಕೆಟ್‌ ಅನ್ನು ಬಳಿಕ ಬೇರೊಂದು ಕಕ್ಷೆಯಲ್ಲಿ ಇರಿಸಲಾಗಿತ್ತು. ಆ ಕಕ್ಷೆಯಿಂದ ಅ.6ರಂದು ಅದು ನಿಗದಿಯಂತೆ ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ಬಿದ್ದಿದೆ ಎಂದು ಇಸ್ರೋ ಹೇಳಿದೆ. ಬಾಹ್ಯಾಕಾಶವನ್ನು ಅವಶೇಷ ಮುಕ್ತಗೊಳಿಸುವ ಸಲುವಾಗಿ ರಾಕೆಟ್‌ಗಳನ್ನು ಮರಳಿ ಭೂಮಿಗೆ ತರುವ ಕೆಲಸಗಳನ್ನು ಎಲ್ಲಾ ದೇಶಗಳು ಮಾಡುತ್ತಿವೆ.