ಯುಪಿಎಸ್ ಹೊಸ ಪಿಂಚಣಿ ಯೋಜನೆ: ನಿರ್ಮಲಾ

| Published : Aug 28 2024, 12:46 AM IST

ಸಾರಾಂಶ

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಹೊಸ ಯೋಜನೆಯೇ ಹೊರತು, ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ನಾವು ಯು-ಟರ್ನ್‌ ಮಾಡಿಲ್ಲ.

ನವದೆಹಲಿ: ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಹೊಸ ಯೋಜನೆಯೇ ಹೊರತು, ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ನಾವು ಯು-ಟರ್ನ್‌ ಮಾಡಿಲ್ಲ. ನಮ್ಮದು ಯು-ಟರ್ನ್‌ ಸರ್ಕಾರ ಅಲ್ಲ. ಜನರಿಗೆ ಏನು ಬೇಕೋ ಅದನ್ನು ನೀಡುವ ಸರ್ಕಾರ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಅರೆ.

ಯುಪಿಎಸ್‌ ಉತ್ತಮವಾಗಿದೆ ಮತ್ತು ಹೆಚ್ಚಿನ ಸರ್ಕಾರಿ ನೌಕರರನ್ನು ತೃಪ್ತಿಪಡಿಸುತ್ತದೆ. ಪ್ರತಿ ಲೆಕ್ಕಾಚಾರಕ್ಕೆ ಸರಿಹೊಂದುವ ರೀತಿಯಲ್ಲಿ ಯುಪಿಎಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಸರ್ಕಾರಕ್ಕೂ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು ಹಾಗೂ ಈ ವಿಷಯದಲ್ಲಿ ಕಾಂಗ್ರೆಸ್‌ ತಪ್ಪು ಪ್ರಚಾರ ಮಡುತ್ತಿದೆ ಎಂದು ಕಿಡಿಕಾರಿದರು.

ಹೆಚ್ಚಿನ ರಾಜ್ಯಗಳು ಯುಪಿಎಸ್ ಅನ್ನು ಅಳವಡಿಸಿಕೊಳ್ಳುತ್ತವೆ, ಏಕೆಂದರೆ ಇದು ಉದ್ಯೋಗಿಗಳಿಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

---

ಜನಧನಕ್ಕೆ ಇಂದು 10 ವರ್ಷ

ನವದೆಹಲಿ: 2014ರ ಆ.28ರಂದು ಆರಂಭವಾದ ಜನಧನ ಯೋಜನೆಗೆ ಬುಧವಾರ 10 ವರ್ಷ ಸಂದಲಿದೆ. ಯೋಜನೆ ಆರಂಭವಾದಾಗ 14.72 ಕೋಟಿ ಇದ್ದ ಬ್ಯಾಂಕ್‌ ಖಾತೆಗಳ ಸಂಖ್ಯೆ ಈಗ 53.13 ಕೋಟಿಗೆ ಏರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 3 ಕೋಟಿ ಹೊಸ ಜನಧನ ಖಾತೆ ತೆರೆವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.