ಪ್ರಜಾಸತ್ತೆಯಲ್ಲಿ ನಮಗಿಂತ ಭಾರತ ಉತ್ತಮ: ಅಮೆರಿಕ

| Published : May 10 2024, 11:46 PM IST / Updated: May 11 2024, 09:02 AM IST

ಪ್ರಜಾಸತ್ತೆಯಲ್ಲಿ ನಮಗಿಂತ ಭಾರತ ಉತ್ತಮ: ಅಮೆರಿಕ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಎದ್ದಿರುವ ಆಕ್ಷೇಪಗಳನ್ನು ಗುರುವಾರ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟಿ ತಳ್ಳಿಹಾಕಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿಚಾರದಲ್ಲಿ ಅನೇಕ ರೀತಿಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು ಎಂದು ಹೇಳಿದ್ದಾರೆ.

 ವಾಷಿಂಗ್ಟನ್‌ :  ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಎದ್ದಿರುವ ಆಕ್ಷೇಪಗಳನ್ನು ಗುರುವಾರ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟಿ ತಳ್ಳಿಹಾಕಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿಚಾರದಲ್ಲಿ ಅನೇಕ ರೀತಿಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು ಎಂದು ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಗುರುವಾರ ಮಾತನಾಡಿದ ಅವರು, ‘10 ವರ್ಷಗಳ ನಂತರ ಭಾರತವು ಇಂದಿನಂತೆಯೇ ಪ್ರಜ್ವಲಿಸುವ ಪ್ರಜಾಪ್ರಭುತ್ವ ದೇಶವಾಗೇ ಉಳಿಯಲಿದೆ. ಏಕೆಂದರೆ . ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ನಿಯಮ ಅಲ್ಲಿವೆ’ ಎಂದರು.‘ಭಾರತದ ಚುನಾವಣೆಯಲ್ಲಿ ಕೆಲವು ನಿಯಮ ಇವೆ. ಯಾವುದೇ ವ್ಯಕ್ತಿ ಮತ ಹಾಕಲು 2 ಕಿ.ಮೀ.ಗಿಂತ ಹೆಚ್ಚು ಹೋಗುವಂತಿಲ್ಲ. ಅಲ್ಲದೆ, ಪರ್ವತದಲ್ಲಿ ಒಬ್ಬ ಸನ್ಯಾಸಿ ಇದ್ದು, ಆತನಿಗಾಗಿ ಮತಗಟ್ಟೆ ಸ್ಥಾಪಿಸಲು ಚುನಾವಣಾ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಅಲ್ಲದೆ, ಚುನಾವಣೆ ವೇಳೆ ಹಣದ ಸಾಗಣೆ ಮೇಲೆ ನಿಗಾಗೆ ವಾಹನ ಪರಿಶೀಲಿಸಲಾಗುತ್ತದೆ. ಹೀಗಾಗಿ ಪ್ರಜಾಸತ್ತೆ ವಿಷಯದಲ್ಲಿ ಅಮೆರಿಕಕ್ಕಿಂತ ಭಾರತೀಯರು ಉತ್ತಮ ಸ್ಥಿತಿಯಲ್ಲಿದ್ದಾರೆ’ ಎಂದು ಶ್ಲಾಘಿಸಿದರು.

ಇದೇ ವೇಳೆ, ‘ಅವಕಾಶ ಸಿಕ್ಕರೆ ಅಮೆರಿಕನ್ನರು ಅಮೆರಿಕಕ್ಕಿಂತ ಭಾರತದಲ್ಲಿ ಉತ್ತಮ ಮತದಾನ ಮಾಡಬಲ್ಲರು’ ಎಂದು ಗಾರ್ಸೆಟಿ ಚಟಾಕಿ ಹಾರಿಸಿದರು.