ಟ್ರಂಪ್‌ ಆಪ್ತನಿಂದ ಆಂಜನೇಯನ ಅವಹೇಳನ

| Published : Sep 24 2025, 01:00 AM IST

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಪ್ತರ ಭಾರತ ವಿರೋಧಿ ಹೇಳಿಕೆಗಳು ಮುಂದುವರಿದಿದ್ದು, ಈ ಬಾರಿ ಹನುಮಂತ ದೇವರ ವಿರುದ್ಧ ರಿಪಬ್ಲಿಕನ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಹನುಮಂತ ನಕಲಿ ದೇವರು. ಕ್ರೈಸ್ತ ದೇಶವಾದ ಅಮೆರಿಕದಲ್ಲೇಕೆ ಆತನ ಪ್ರತಿಮೆ ಇದೆ? ಎಂದು ಪ್ರಶ್ನಿಸಿದ್ದಾರೆ.

- ಹನುಮಂತ ನಕಲಿ ದೇವರು

- ಆತನ ಪ್ರತಿಮೆ ಅಮೆರಿಕದಲ್ಲೇಕೆ?ಪಿಟಿಐ ಹೂಸ್ಟನ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಪ್ತರ ಭಾರತ ವಿರೋಧಿ ಹೇಳಿಕೆಗಳು ಮುಂದುವರಿದಿದ್ದು, ಈ ಬಾರಿ ಹನುಮಂತ ದೇವರ ವಿರುದ್ಧ ರಿಪಬ್ಲಿಕನ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಹನುಮಂತ ನಕಲಿ ದೇವರು. ಕ್ರೈಸ್ತ ದೇಶವಾದ ಅಮೆರಿಕದಲ್ಲೇಕೆ ಆತನ ಪ್ರತಿಮೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ ಟ್ವೀಟ್‌ ಮಾಡಿರುವ ಅಲೆಕ್ಸಾಂಡರ್‌ ಡಂಕನ್‌ ಅವರು ಟೆಕ್ಸಾಸ್‌ನಲ್ಲಿ ನಿರ್ಮಾಣ ಆಗಿರುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಪ್ರಶ್ನಿಸಿದ್ದಾರೆ. ‘ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಾಗಿದ್ದು, ಇಲ್ಲಿ ನಕಲಿ ಹಿಂದೂ ದೇವರ ಪ್ರತಿಮೆ ಇರುವುದು ಸರಿಯಲ್ಲ. ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಾವೇಕೆ ಅನುಮತಿ ನೀಡಿದ್ದೇವೆ?’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಅಮೆರಿಕ ಹಿಂದೂ ಪ್ರತಿಷ್ಠಾನ ಕಿಡಿಕಾರಿದ್ದು, ಡಂಕನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಎಂಬಲ್ಲಿ ಅಷ್ಟಲಕ್ಷ್ಮಿ ದೇವಸ್ಥಾನವಿದ್ದು ಅದರಲ್ಲಿ ಹನುಮಂತನ ಪ್ರತಿಮೆ ಸ್ಥಾಪಿಸಲಾಗಿದೆ. ಅದಕ್ಕೆ ‘ಸ್ಟ್ಯಾಚೂ ಆಫ್ ಯೂನಿಯನ್’ ಎಂದೂ ಕರೆಯುತ್ತಾರೆ.