ಬಾಲರಾಮನ ಮೂರ್ತಿ ಭವ್ಯತೆಯಿಂದ ಕೂಡಿತ್ತು: ಅರುಣ್‌ ಪತ್ನಿ

| Published : Apr 18 2024, 02:25 AM IST / Updated: Apr 18 2024, 06:30 AM IST

ಬಾಲರಾಮನ ಮೂರ್ತಿ ಭವ್ಯತೆಯಿಂದ ಕೂಡಿತ್ತು: ಅರುಣ್‌ ಪತ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲರಾಮ ಪ್ರತಿದಿನ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾನೆ. ಆದರೆ ರಾಮನವಮಿಯ ಈ ಶುಭದಿನದಂದು ಆತನ ಮೂರ್ತಿ ಭವ್ಯತೆಯಿಂದ ಕೂಡಿರುವಂತೆ ಭಾಸವಾಯಿತು ಎಂದು ಬಾಲರಾಮನ ಮೂರ್ತಿ ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್‌ ಅವರ ಪತ್ನಿ ವಿಜೇತಾ ತಿಳಿಸಿದ್ದಾರೆ.

ಅಯೋಧ್ಯೆ: ಬಾಲರಾಮ ಪ್ರತಿದಿನ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾನೆ. ಆದರೆ ರಾಮನವಮಿಯ ಈ ಶುಭದಿನದಂದು ಆತನ ಮೂರ್ತಿ ಭವ್ಯತೆಯಿಂದ ಕೂಡಿರುವಂತೆ ಭಾಸವಾಯಿತು ಎಂದು ಬಾಲರಾಮನ ಮೂರ್ತಿ ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್‌ ಅವರ ಪತ್ನಿ ವಿಜೇತಾ ತಿಳಿಸಿದ್ದಾರೆ.

ಈ ಬಗ್ಗೆ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಜೇತಾ, ‘ಶತಮಾನಗಳಿಂದ ಕಂಡಿದ್ದ ಕನಸು ಈ ರಾಮನವಮಿಯಂದು ಸಾಕಾರವಾಗಿದೆ. ಬಾಲರಾಮನಿಗೆ ಸೂರ್ಯ ತಿಲಕ ಬೀಳುವ ಕೌತುಕವನ್ನು ಕಣ್ತುಂಬಿಕೊಂಡು ಧನ್ಯನಾಗಿದ್ದೇನೆ. ನನ್ನ ಪತಿಗೆ ಶ್ರೀರಾಮ ಹಾಗೂ ಹಿರಿಯರ ಆಶೀರ್ವಾದದಿಂದಲೇ ಸದಾ ಯಶಸ್ಸು ಲಭಿಸುತ್ತಿದೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.