ಯೋಧರ ಕುಟುಂಬಕ್ಕೆ ವಕ್ಫ್‌ ಭೂಮಿ: ಜೆಪಿಸಿಗೆ ಉ.ಖಂಡ ವಕ್ಫ್‌ ಮಂಡಳಿ ಶಿಫಾರಸು

| Published : Oct 31 2024, 12:47 AM IST

ಯೋಧರ ಕುಟುಂಬಕ್ಕೆ ವಕ್ಫ್‌ ಭೂಮಿ: ಜೆಪಿಸಿಗೆ ಉ.ಖಂಡ ವಕ್ಫ್‌ ಮಂಡಳಿ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಭೂಮಿ ದೇಶವ್ಯಾಪಿ ವಿವಾದಕ್ಕೆ ಕಾರಣವಾಗಿರುವಾಗಲೇ, ರಾಜ್ಯದಲ್ಲಿನ ವಕ್ಫ್‌ ಭೂಮಿಯನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಕುಟುಂಬಕ್ಕೆ ನೀಡುವಂತೆ ಉತ್ತರಾಖಂಡದ ವಕ್ಫ್‌ ಮಂಡಳಿ, ಸಂಸತ್ತಿನ ಸ್ಥಾಯಿ ಸಮಿತಿಗೆ ಸಲಹೆ ನೀಡಿದೆ.

ಡೆಹ್ರಾಡೂನ್‌: ವಕ್ಫ್‌ ಭೂಮಿ ದೇಶವ್ಯಾಪಿ ವಿವಾದಕ್ಕೆ ಕಾರಣವಾಗಿರುವಾಗಲೇ, ರಾಜ್ಯದಲ್ಲಿನ ವಕ್ಫ್‌ ಭೂಮಿಯನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಕುಟುಂಬಕ್ಕೆ ನೀಡುವಂತೆ ಉತ್ತರಾಖಂಡದ ವಕ್ಫ್‌ ಮಂಡಳಿ, ಸಂಸತ್ತಿನ ಸ್ಥಾಯಿ ಸಮಿತಿಗೆ ಸಲಹೆ ನೀಡಿದೆ. ಅಲ್ಲದೆ ಇಂಥ ಭೂಮಿಯನ್ನು ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲದೇ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲು ಒಲವು ವ್ಯಕ್ತಪಡಿಸಿದೆ. ವಕ್ಫ್‌ ತಿದ್ದುಪಡಿ ಕಾಯ್ದೆ ಕುರಿತು ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ವಕ್ಫ್‌ ಮಂಡಳಿ ಸದಸ್ಯರು ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅಲ್ಲದೆ ಏಕರೂಪ ನಾಗರಿಕ ಸಂಹಿತೆ ಜಾರಿ ಬಳಿಕ ಎಲ್ಲರಿಗೂ ಒಂದೇ ಕಾನೂನು ಅನ್ವಯ ಆಗುವ ಕಾರಣ ವಕ್ಫ್‌ ಮತ್ತು ಮದರಸಾ ಮಂಡಳಿಯನ್ನು ರದ್ದುಪಡಿಸುವಂತೆಯೂ ಮಂಡಳಿ ಶಿಫಾರಸ್ಸು ಮಾಡಿದೆ.