ಸಾರಾಂಶ
ಇಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಅದರಲ್ಲಿ ಸಿಲುಕಿಕೊಂಡಿರುವ 40 ಜನ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗಿದೆ. ಮಣ್ಣು ಕುಸಿತದ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಕುಸಿತ ಸಂಭವಿಸುತ್ತಿದೆ.
ಉತ್ತರಕಾಶಿ: ಇಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಅದರಲ್ಲಿ ಸಿಲುಕಿಕೊಂಡಿರುವ 40 ಜನ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗಿದೆ. ಮಣ್ಣು ಕುಸಿತದ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಕುಸಿತ ಸಂಭವಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಗಂಟೆಗೆ 5 ಮೀಟರ್ ದೂರ ಜಾಗ ತೆರವುಗೊಳಿಸುವ ಅತ್ಯಾಧುನಿಕ ಯಂತ್ರವೊಂದನ್ನು ವಿಮಾನದ ಮೂಲಕ ತರಲಾಗಿದೆ. ಈ ಯಂತ್ರವನ್ನು ಬಿಡಿಬಿಡಿಯಾಗಿ ತಂದು ಜೋಡಿಸಿ, ಗುರುವಾರದಿಂದ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಕಾರ್ಯಾಚರಣೆ ಆರಂಭಿಸಿದ ಕನಿಷ್ಠ 10 ಗಂಟೆಗಳ ಬಳಿಕ ಅದು ಕಾರ್ಮಿಕರು ಇರುವ ಸ್ಥಳ ತಲುಪಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ ಗುರುವಾರ ಸಂಜೆಯ ಬಳಿಕವಷ್ಟೇ ಕಾರ್ಮಿಕರ ರಕ್ಷಣೆ ಭರವಸೆ ವ್ಯಕ್ತವಾಗಿದೆ.ಈ ನಡುವೆ ನೀರು, ಅಹಾರಕ್ಕಿಂತ ಒಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರು ಮಾನಸಿಕವಾಗಿ ಖಿನ್ನತೆಯ ಸಮಸ್ಯೆ, ಶೌಚದ ಸಮಸ್ಯೆ ಎದುರಿಸುತ್ತಿರಬಹುದು. ಅದೇ ಅವರನ್ನು ಹೆಚ್ಚಾಗಿ ಕಾಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.